ಪ್ರಮುಖ ಸುದ್ದಿಮೈಸೂರು

ಜ.28ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘ದೆಹಲಿ ಚಲೋ’

ಮೈಸೂರು,ಜ.22 : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ, ಅಂಗನವಾಡಿ, ಬಿಸಿಯೂಟ ಯೋಜನೆಗಳ ಕಾರ್ಯಕರ್ತರು ಜ.28ರಂದು ‘ದೆಹಲಿ ಚಲೋ’ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ನ ರಾಜ್ಯ ಕಾರ್ಯಕಾರಿ ಸದಸ್ಯ ಶಶಿಧರ್ ತಿಳಿಸಿದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ದೇಶಾಧ್ಯಂತ ಸುಮಾರು 46 ಲಕ್ಷ ಮಹಿಳಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ, ಆದರೆ ಈ ವರ್ಗಕ್ಕೆ ನಿಗದಿತ ವೇತನ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಮಿಕ ಕಾಯ್ದೆ ಪ್ರಕಾರ ದುಡಿಯುವ ವರ್ಗಕ್ಕೆ 21 ಸಾವಿರ ಕನಿಷ್ಟ ವೇತನ ನೀಡಬೇಕು, ಕಾರ್ಯಕರ್ತೆಯನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಈಗಾಗಲೇ ವರದಿ ನೀಡಿದ್ದರು ಸರ್ಕಾರಿ ಜಾರಿಗೊಳಿಸುತ್ತಿಲ್ಲ. ಪ್ರೋತ್ಸಾಹ ಧನವನ್ನು ದ್ವಿಗುಣಗೊಳಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ, ಗೌರವ ಧನವನ್ನು ಹಲವು ರಾಜ್ಯಗಳಲ್ಲಿ ನಿಗದಿತ ವೇಳೆಗೆ ನೀಡದೆ ಜೀವನ ನಡೆಸಲು ತೊಂದರೆಯಾಗಿದೆ ಎಂದು ಆರೋಪಿಸಿದರು.

ಚಾಮರಾಜನಗರ, ಮಂಡ್ಯ, ಮಡಿಕೇರಿ, ಹಾಸನ ಸೇರಿದಂತೆ ಮೈಸೂರು ಭಾಗದಿಂದ 500ಕ್ಕೂ ಹೆಚ್ಚು ಕಾರ್ಯಕರ್ತೆಯರು ಜ.25ರಂದು ನಗರದ ಸ್ವರ್ಣಜಯಂತಿ ರೈಲಿನಿಂದ ದೆಹಲಿಗೆ ಪಯಣ ಬೆಳೆಸಲಿದ್ದು ಜ.28ರಂದು ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ದೇಶಾದ್ಯಂತ ಒಂದೂವರೆಯಿಂದ ಎರಡು ಲಕ್ಷ ಕಾರ್ಯಕರ್ತೆಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಬೇಡಿಕೆ : ಯೋಜನೆಯಡಿ ದುಡಿಯುವ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು, ಕಾರ್ಮಿಕರೆಂದು ಪರಿಗಣಿಸಬೇಕು, ಕನಿಷ್ಠ 21 ಸಾವಿರ ಮಾಸಿಕ ವೇತನ ನಿಗದಿಗೊಳಿಸಬೇಕು. ನಿವೃತ್ತಿ ಬಳಿಕ 6 ಸಾವಿರ ರೂ.ಗಳ ಪಿಂಚಣಿ, ಪಿಎಫ್. ಇಎಸ್.ಐ, ಗ್ರಾಚ್ಯುಟಿ, ತುಟ್ಟಿ ಭತ್ಯೆ ಇನ್ನಿತರೆ ಸೌಲಭ್ಯ ನೀಡಬೇಕು.

ಖಾಸಗೀಕರಣ ನಿಲ್ಲಿಸಬೇಕು ಹಾಗೂ ಬಜೆಟ್ ನಲ್ಲಿ ಹೆಚ್ಚು ಹಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಎಐಯುಟಿಯುಸಿ ಜಿಲ್ಲಾ ಸಂಚಾಲಕ ಚಂದ್ರಶೇಖರ್, ಮಹಿಳಾ ಹೋರಾಟಗಾರ್ತಿ ಸಂದ್ಯಾ, ಆಶಾ ಕಾ ಬಿಸಿಯೂಟ ಕಾರ್ಯಕರ್ತೆಯರಾದ ಗೀತಾ, ಜಯಮ್ಮ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: