ಸುದ್ದಿ ಸಂಕ್ಷಿಪ್ತ

ಸುತ್ತೂರು ಜಾತ್ರೆ – ಉಚಿತ ಸಾಮೂಹಿಕ ವಿವಾಹ

ಸುತ್ತುರು ಕ್ಷೇತ್ರದಲ್ಲಿ ಜನವರಿ 24ರಿಂದ 29ರ ವರೆಗೆ ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜರುಗಲಿದೆ. ಜ.25 ರಂದು ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ.

ವಧುವಿಗೆ ಸೀರೆ, ಕುಪ್ಪಸ, ಕಾಲುಂಗುರ ಹಾಗೂ ಮಾಂಗಲ್ಯ, ವರನಿಗೆ ಪಂಚೆ, ವಲ್ಲಿ ಹಾಗೂ ಷರ್ಟ್ ನೀಡಲಾಗುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಮುಕ್ತ ಅವಕಾಶವಿರುತ್ತದೆ. ವಧು-ವರರ ಜೊತೆಯಲ್ಲಿ ಬರುವ ಬಂದು ವರ್ಗದವರಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ವಿವಾಹವಾಗ ಬಯಸುವವರು ನಿಗದಿತ ಅರ್ಜಿ ಪಡೆದು ಪೂರ್ಣ ವಿವರ ಹಾಗೂ ಅಗತ್ಯ ದಾಖಲಾತಿ ನೀಡಿ ಜ.15ರ ವರೆಗೂ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ.

ಹೆಚ್ಚಿನ ವಿವರಗಳಿಗೆ ಆರ್.ಕುಮಾರಸ್ವಾಮಿ 9448674702; ಸಿ.ಮಹದೇವಪ್ರಸಾದ್ 9449030588; ಅಥವಾ ಜಾತ್ರಾ ಮಹೋತ್ಸವ ಕಾರ್ಯಾಲಯವನ್ನು 0821-2548212 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: