ಮನರಂಜನೆ

ಲೋಕಸಭೆಗೆ ಸ್ಪರ್ಧೆ: ಕಾಂಗ್ರೆಸ್ ಅವಕಾಶ ನಿರಾಕರಿಸಿದ ನಟಿ ಕರೀನಾ ಕಪೂರ್

ಮುಂಬೈ (ಜ 22): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಸ್ಪರ್ಧಿಸಲಿದ್ದಾರಾ? ಈ ಪ್ರಶ್ನೆಗೆ ಕರೀನಾ ಸ್ಪಷ್ಟನೆ ನೀಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕರೀನಾ ಕಪೂರ್, ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸಂಬಂಧ, ಕಾಂಗ್ರೆಸ್ ಮುಖಂಡರು ಒಂದು ಹಂತದ ಮಾತುಕತೆಯನ್ನೂ ನಡೆಸಿದ್ದರು ಎಂದು ವರದಿಯಾಗಿತ್ತು.

ಆದರೆ, ತಾವು ರಾಜಕೀಯಕ್ಕೆ ಪ್ರವೇಶಿಸುವ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕರೀನಾ, ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಗುರಿ ಏನಿದ್ದರೂ ಸಿನಿಮಾ ರಂಗ ಮಾತ್ರ ಎಂದಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಯೋಗೇಂದ್ರ ಸಿಂಗ್ ತಮ್ಮ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದು, ಭೋಪಾಲ್ ಕ್ಷೇತ್ರದಿಂದ ಕರೀನಾ ಕಪೂರ್ ಉತ್ತಮ ಅಭ್ಯರ್ಥಿಯಾಗಬಲ್ಲರು ಎನ್ನುವ ಸಲಹೆಯನ್ನು ನೀಡಿದ್ದರು.

ಬಿಜೆಪಿ ವ್ಯಂಗ್ಯ:

ಕಾಂಗ್ರೆಸ್ ಪಕ್ಷದ ಮುಖಂಡನ ಸಲಹೆಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, ನಾವು ಭೋಪಾಲ್ ಕ್ಷೇತ್ರದಲ್ಲಿ ಅತ್ಯಂತ ಬಲಶಾಲಿಯಾಗಿದ್ದೇವೆ. ಯಾರು ನಿಂತರೂ ನಮಗೆ ಚಿಂತೆಯಿಲ್ಲ, ಬಹುಷಃ ಕಾಂಗ್ರೆಸ್ಸಿಗೆ ಅಭ್ಯರ್ಥಿಯ ಕೊರತೆ ಕಾಡುತ್ತಿದೆ ಎಂದು ಹೇಳಿದ್ದಾರೆ. ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ 1989ರಿಂದ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ. ಕ್ಷೇತ್ರದ ಹಾಲೀ ಸಂಸದ ಬಿಜೆಪಿಯ ಅಲೋಕ್ ಸಂಜರ್. (ಎನ್.ಬಿ)

Leave a Reply

comments

Related Articles

error: