ಸುದ್ದಿ ಸಂಕ್ಷಿಪ್ತ
ಸಾಂಸ್ಕೃತಿಕ ವೇದಿಕೆ ಸಮಾರೋಪ .24.
ಮೈಸೂರು,ಜ.22 : ಡಿ. ಬನುಮಯ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ಸಾಂಸ್ಕೃತಿಕ ವೇದಿಕೆಯ ಸಮಾರೋಪವನ್ನು ಜ.24ರ ಬೆಳಗ್ಗೆ 10 ಗಂಟೆಗೆ ಕಾಲೇಜಿನ ಕಲಾಭವನದಲ್ಲಿ ಏರ್ಪಡಿಸಲಾಗಿದೆ.
ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಸ್.ಶಿವಾಜಿ ಜೋಯಿಸ್ ಮುಖ್ಯ ಅತಿಥಿಯಾಗಿದ್ದಾರೆ. ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್.ಜೆ.ಲಕ್ಷ್ಮೇಗೌಡ ಅಧ್ಯಕ್ಷತೆ ವಹಿಸುವರು. ಗೌರವ ಕಾರ್ಯದರ್ಶಿ ಡಾ.ವಿ.ಬಿ.ಜಯದೇವ, ಆಡಳಿತಾಧಿಕಾರಿ ಡಾ.ಎನ್.ತಿಮ್ಮಯ್ಯ, ಪ್ರಾಂಶುಪಾಲರಾದ ಎಂ.ಚಂದ್ರಶೇಖರ್ ಮೊದಲಾದವರು ಹಾಜರಿರಲಿದ್ದಾರೆ. (ಕೆ.ಎಂ.ಆರ್)