ಮೈಸೂರು

ಗಾಯಗೊಂಡಿದ್ದ 7 ವರ್ಷದ ಗಂಡು ಹುಲಿ ಸಾವು

ಹೆಚ್ ಡಿ ಕೋಟೆಯ ಮುತ್ತಿಗೆ ಹುಂಡಿ ತಲಲು ಗ್ರಾಮ ನುಗು  ಹಿನ್ನೀರಿನ ಬಳಿ ಹುಲಿಯೊಂದು ಬಲಗಾಲಿಗೆ ಪೆಟ್ಟು ಬಿದ್ದ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು.
ಹುಲಿಯನ್ನು ರಕ್ಷಿಸಲು ಅರವಳಿಕೆ ಚುಚ್ಚುಮದ್ದನ್ನು ನೀಡಲಾಗಿತ್ತು‌.
ಪ್ರಾಥಮಿಕ ಚಿಕಿತ್ಸೆ ವೇಳೆ ಹುಲಿ ಸ್ಪೆಷಲ್ ಟೈಗರ್ ಪೋರ್ಸ್ (STPF)ರುದ್ರೇಶ್ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ ರುದ್ರೇಶ್ ಬಲಗೈಗೆ ತೀವ್ರ ಗಾಯವಾಗಿತ್ತು. ಈ ವೇಳೆ ಹುಲಿಗೆ ಮತ್ತೊಂದು ಅರೆವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಹುಲಿ ಸೆರೆ ಹಿಡಿದು ಬನ್ನೇರುಘಟ್ಟ ಉದ್ಯಾನವನಕ್ಕೆ ರವಾನಿಸುವಾಗ ದಾರಿ ಮಧ್ಯದಲ್ಲಿ ಹುಲಿ ಅಸುನೀಗಿದೆ.
ಹುಲಿಯ ಸಾವಿಗೆ ಅವೈಜ್ಞಾನಿಕ ಕಾರ್ಯಚರಣೆಯೇ ಕಾರಣ ಎನ್ನಲಾಗಿದೆ.
ಸಿಎಫ್ ಒ ಹೀರಾಲಾಲ್, ಯಡಿಯಾಲದ ಆರ್ ಎಫ್ ಒ ಸಂದಿಪ್, ಎಸಿಎಫ್  ಪರಮೇಶ್ವರ್, ಹಾಗೂ ವನ್ಯಜೀವಿ ವೈದ್ಯ ಡಾ. ನಾಗರಾಜ್  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಲೇಯೂರು ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

comments

Related Articles

error: