ಮೈಸೂರು

ಕಲಾಭಿವರ್ಧನ ಕಲೋತ್ಸವದಲ್ಲಿ ಕೂಚಿಪುಡಿ, ಒಡಿಸ್ಸಿ ಹಾಗೂ ಕಥಕ್ ನೃತ್ಯ ಪ್ರದರ್ಶನ

ಮೈಸೂರು,ಜ.23:- ಕಲಾ ಸಂದೇಶ ಪ್ರತಿಷ್ಠಾನವು ಲಲಿತ ಕಲೆಗಳಲ್ಲಿ ಒಂದಾದ ಭರತನಾಟ್ಯವನ್ನು ಭೋದಿಸುವ ಕಲಾ ಸಂಸ್ಥೆ. ಈ ಸಂಸ್ಥೆಯು ಭರತನಾಟ್ಯಕಲೆಯನ್ನು ಸಂರಕ್ಷಿಸುವ ಮತ್ತು ಪೋಷಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಆರನೇ ವರ್ಷದ ಕಲಾಭಿವರ್ಧನ ಕಲೋತ್ಸವ. ಇದು ಭಾರತೀಯ ಕಲೆಗಳ ಆರಾಧನಾ ಪರ್ವ. ಈ ಬಾರಿಯ ಕಲಾಭಿವರ್ಧನ ಕಲೋತ್ಸವ ಜನವರಿ 19ರಿಂದ ಜನವರಿ 30ರವರೆಗೆ ಮೈಸೂರಿನಲ್ಲಿ ನಡೆಯಲಿದೆ.

ನಾಲ್ಕನೇ ದಿನ ಕೂಚಿಪುಡಿ, ಒಡಿಸ್ಸಿ  ಹಾಗೂ ಕಥಕ್ ನೃತ್ಯ ಪ್ರದರ್ಶನ

ಏಕತಾ ನೃತ್ಯಾಲಯವು ಕಲಾ ಸಂದೇಶ ಪ್ರತಿಷ್ಠಾನದ ಸಹಯೋಗದೊಂದಿಗೆ ನಾಲ್ಕನೇ ದಿನದ ಕಲೋತ್ಸವ ನಡೆಸಿದೆ. ಭಾರತನಾಟ್ಯದೊಂದಿಗೆ ಇನ್ನೂ ಅನೇಕ ಶಾಸ್ತ್ರೀಯ ನೃತ್ಯ ಪದ್ಧತಿಗಳ ಹಾಗೂ ದೇಶ್ಯಾದಂತ ನೃತ್ಯ ಪ್ರತಿಭೆಗಳ ಅನ್ವೇಷಣೆ ಮಾಡುತ್ತಾ ದೈವಿಕ ಕಲೆಯಾದ ನಾಟ್ಯವನ್ನು ದೇಶದುದ್ದಗಲಕ್ಕೂ ಪರಿಚಯಿಸುವ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಏಕತಾ ನೃತ್ಯಾಲಯ. ಈ ಸಂಸ್ಥೆಯು ಎರಡು ವರ್ಷದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನೃತ್ಯ ಪ್ರದರ್ಶನದ ಆಯೋಜನೆ ಮಾಡಿದೆ.

ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಿನ್ನೆ ಸಂಜೆ 6ರಿಂದ ರಾತ್ರಿ 9 ರವರೆಗೆ ಮೂರು ನೃತ್ಯ ಪ್ರದರ್ಶನ ಆಯೋಜಿಸಿತ್ತು.

ಕೂಚಿಪುಡಿ  ವಿದ್ವಾನ್ ಗುರುರಾಜ ಏನ್, ಬೆಂಗಳೂರು , ಒಡಿಸ್ಸಿ ವಿದ್ವಾನ್ ಕೌಶಿಕ್ ದಾಸ್, ಕೊಲ್ಕತ್ತಾ,  ಕಥಕ್  ವಿದ್ವಾನ್ ಲಕ್ಷ್ಮೀನಾರಾಯಣ ಜೈನ, ಬೆಂಗಳೂರುಇವರು ನೃತ್ಯ ಪ್ರದರ್ಶಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: