ಕ್ರೀಡೆ

ಅದ್ಭುತ ಕ್ಯಾಚ್ ಹಿಡಿದ ಸ್ಪಿನ್ನರ್ ಗಳಾದ ಕುಲದೀಪ್, ಚಹಲ್

ನೇಪಿಯರ್,ಜ.23-ಭಾರತದ ಸ್ಪಿನ್ನರ್ ಗಳಾದ ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಹಲ್ ಬೌಲಿಂಗ್ ಮಾತ್ರವಲ್ಲದೆ ಕ್ಷೇತ್ರರಕ್ಷಣೆಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಮೆಕ್‌ಲೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇವರಿಬ್ಬರು ಅದ್ಭುತವಾಗಿ ಆಡಿದ್ದಾರೆ.

ತಮ್ಮದೇ ದಾಳಿಯಲ್ಲಿ ಯುಜ್ವೇಂದ್ರ ಚಹಲ್ ಎರಡು ಕ್ಯಾಚ್ ಗಳನ್ನು ಹಿಡಿದರೆ ಕುಲ್‌ದೀಪ್ ಯಾದವ್ ಡೈವ್ ಹೊಡೆಯುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು.

ಉತ್ತಮವಾಗಿ ಆಡುತ್ತಿದ್ದ ರಾಸ್ ಟೇಲರ್ ಹಾಗೂ ಟಾಮ್ ಲೇಥಮ್ ಅವರನ್ನ ತಮ್ಮದೇ ದಾಳಿಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಚಹಲ್ ಹೊರಗಟ್ಟಿದರು. ಈ ಎರಡು ಕ್ಯಾಚ್‌ಗಳು ಪಂದ್ಯದ ಗತಿಯನ್ನೇ ಬದಲಾಯಿಸಿತು.

ಬಳಿಕ ಕೇದರ್ ಜಾಧವ್ ದಾಳಿಯಲ್ಲಿ ಹೆನ್ರಿ ನಿಕೋಲಸ್‌ರನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕುಲ್‌ದೀಪ್ ಹೊರದಬ್ಬಿದರು. ಈ ಮೂಲಕ ಕಿವೀಸ್ ಮೇಲೆ ಹಿಡಿತ ಸಾಧಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು. (ಎಂ.ಎನ್)

Leave a Reply

comments

Related Articles

error: