Uncategorized

ಶಬರಿಮಲೆ ಪ್ರವೇಶಿಸಿದ್ದ ಮಹಿಳೆಗೆ ಕುಟುಂಬದಿಂದ ಬಹಿಷ್ಕಾರ: ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ

ತಿರುವನಂತಪುರಂ,ಜ.23-ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿ ಇತಿಹಾಸ ಸೃಷ್ಟಿಸಿ ವಿವಾದಕ್ಕೆ ಗುರಿಯಾಗಿದ್ದ ಇಬ್ಬರು ಮಹಿಳೆಯರ ಪೈಕಿ ಕನಕದುರ್ಗಾ ಅವರಿಗೆ ಕುಟುಂಬ ಸದಸ್ಯರು ಬಹಿಷ್ಕಾರ ಹಾಕಿದ್ದಾರೆ.

ಕುಟುಂಬದಿಂದ ಬಹಿಷ್ಕಾರಕ್ಕೊಳಗಾಗಿ ಅತಂತ್ರ ಸ್ಥಿತಿಗೆ ಸಿಲುಕಿರುವ ಕನಕದುರ್ಗಾ ಈಗ ಸರ್ಕಾರಿ ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಶಬರಿಮಲೆ ಪ್ರವೇಶಿಸಿ ಬಂದ ಮೇಲೆ ಅತ್ತೆಯಿಂದ ಹಲ್ಲೆಗೊಳಗಾಗಿ ಸುಮಾರು ಒಂದು ವಾರದಿಂದ ಕೊಯಿಕ್ಕೋಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಕದುರ್ಗಾ, ಮನೆಗೆ ಹಿಂದಿರುಗಿದಾಗ ಪತಿ ಹಾಗೂ ಭಾವಂದಿರು ಪ್ರವೇಶ ನಿರಾಕರಿಸಿದ್ದಾರೆ. ಇತ್ತ ಮಹಿಳೆಯ ಸಹೋದರ ಸಹ ತವರು ಮನೆಗೆ ಆಕೆಯನ್ನು ಬರಲುಬಿಡದೆ ಹೊರಗೆ ಹಾಕಿದ್ದಾನೆ. ಇದರಿಂದ ದಿಕ್ಕು ತೋಚದ ಕನಕದುರ್ಗಾ ಪೊಲೀಸರ ನೆರವು ಯಾಚಿಸಿ, ಸರ್ಕಾರಿ ಆಶ್ರಯ ತಾಣ ಸೇರಿದ್ದಾರೆ.

ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕನಕದುರ್ಗಾ (39) ಹಾಗೂ ಬಿಂದು (40) ಎಂಬ ಇಬ್ಬರು ಮಹಿಳೆಯರು ಭಕ್ತರ ವಿರೋಧದ ನಡುವೆಯೂ ಶಬರಿಮಲೆ ದೇಗುಲ ಪ್ರವೇಶಿಸಿದ್ದರು. ಕನಕದುರ್ಗಾ ಕುಟುಂಬದ ಮರ್ಯಾದೆ ಹಾಳುಗೆಡವಿದ್ದಾಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: