ಮೈಸೂರು

ಜ.25 – 26 ಜಶ್ನೆ ಈದ್ ಮೀಲಾದ್-ಉನ್-ನಬಿ ,ಜಶ್ನೆ ಗೌಸ್-ಉಲ್-ವಾರಾ ಆಚರಣೆ

ಮೈಸೂರು,ಜ.23:- ಪ್ರತಿ ವರ್ಷದಂತೆ ಈ ವರ್ಷವೂ ಅಲ್‍ಫತಾ ನೌಜವಾನ್ ಟಿಪ್ಪು ಮೀಲಾದ್ ಕಮಿಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ, 2ನೇ ಹಂತ, ಬನ್ನಿಮಂಟಪ, ಮೈಸೂರು ಇವರ ವತಿಯಿಂದ ಜಶ್ನೆ ಈದ್ ಮೀಲಾದ್-ಉನ್-ನಬಿ ಮತ್ತು ಜಶ್ನೆ ಗೌಸ್-ಉಲ್-ವಾರಾ ಆಚರಿಸಲಾಗುವುದು.

25.01.2019 ರಂದು ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ಮೆಹಫಿಲ್ ನಾಥ್‍ಖಾನಿ ಕಾರ್ಯಕ್ರಮ ನಡೆಯುವುದು. 26.01.2019 ರಂದು ರಾತ್ರಿ 8.30 ಕ್ಕೆ  ಸುನ್ನಿ ಉಲ್ಮಾಗಳು ಪ್ರವಾದಿ ಮೊಹಮ್ಮದ್ (ಪಿ.ಬಿ.ಹೆಚ್.ಯು.) ರವರ ಜೀವನ ಚರಿತ್ರೆಯನ್ನು ಕುರಿತು ಭಾಷಣ ಮಾಡಲಿದ್ದಾರೆ.

ಸಮಾಜ ಸೇವಕರಾದ ಮಿರ್ಜಾ ಜಂಷೀದ್ ಬೇಗ್ ಅಶ್ರಫಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಉಲ್ಮಾಗಳು, ಸಮಾಜ ಸೇವಕರು, ಧಾರ್ಮಿಕ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ. ಮಹಿಳೆಯರಿಗಾಗಿ ಪ್ರತ್ಯೇಕ ಕರ್ಟನ್ ಆಸನದ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಮುಬಾರಕ್ ಖಾನ್ ಅವರ ಮೊಬೈಲ್ ಸಂಖ್ಯೆ  8147764788 ನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: