ಮೈಸೂರು

ನಿರ್ದಿಷ್ಟ ಗುರಿ ಇದ್ದಾಗ ಸಾಧನೆ ಸುಲಭ : ಐಜಿಪಿ ವಿಪುಲ್ ಕುಮಾರ್

ಜೀವನದಲ್ಲಿ ನಿರ್ದಿಷ್ಟ ಗುರಿ ಇದ್ದಾಗ ಮಾತ್ರ ಸಾಧನೆ ಸುಲಭವಾಗುತ್ತದೆ ಎಂದು ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಹೇಳಿದರು.

ಮೈಸೂರಿನ ಜ್ಯೋತಿನಗರ ಡಿಎಆರ್ ಕವಾಯತು ಮೈದಾನದಲ್ಲಿ ನಡೆದ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಬಳಿಕ ಮಾತನಾಡಿದ ಅವರು ಆಟದಲ್ಲಿ ಸೋಲು, ಗೆಲುವುಗಳನ್ನು ಮನಸಿಗೆ ತೆಗೆದುಕೊಳ್ಳದೇ ಮುಂದೆ ಸಾಗಬೇಕು. ಕ್ರೀಡೆ ಎನ್ನುವುದು ಮನುಷ್ಯನ ಸೋಲು ಗೆಲುವನ್ನು ನಿರ್ಧಾರ ಮಾಡಲ್ಲ. ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಸಮಯ ಸದುಪಯೋಗ, ಮನಸ್ಥಿತಿ,  ಛಲ, ದೃಢ ನಿರ್ಧಾರ  ಇದ್ದಲ್ಲಿ   ಗುರಿ ಸಾಧಿಸಬಹುದು ಎಂದರು.

ಪೊಲೀಸರು ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡು ಗಮನ ಸೆಳೆದರು.  ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಕಲಾ ಕೃಷ್ಣಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: