ಮೈಸೂರು

ಆಸ್ಪತ್ರೆಯ ಆವರಣದಲ್ಲಿದ್ದ ಗಂಧದ ಮರ ಕಳುವು

ಮೈಸೂರು,ಜ.23:-ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯ ಆವರಣದಲ್ಲಿದ್ದ ಎರಡು ಮರವನ್ನು ಯಾರೋ ಕಳ್ಳರು ಕದ್ದೊಯ್ದಿದ್ದು, ಈ ಕುರಿತು  ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರು ನಗರ ನಜರಬಾದ್‍ನಲ್ಲಿರುವ ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹೆಚ್.ವಿ. ಸಂತೃಪ್ತ್ ಅವರು ತಮ್ಮ ಸಿಬ್ಬಂದಿಯ ಮುಖಾಂತರ ದೂರನ್ನು ನೀಡಿದ್ದು, 21/01/2019 ರ ಬೆಳಗಿನ ಜಾವ ಸುಮಾರು 3.15 ಸಮಯದಲ್ಲಿ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯ ಆವರಣದಲ್ಲಿದ್ದ  2   ಶ್ರೀಗಂಧದ ಮರಗಳನ್ನು ಯಾರೋ ಅಪರಿಚಿತರು  ಕಳವು ಮಾಡಿರುತ್ತಾರೆ. ಆದ್ದರಿಂದ ತಾವು ಗಂಧದ ಮರವನ್ನು ಕಳವು ಮಾಡಿರುವವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: