ಮೈಸೂರು

ಮಹಿಳೆಯೋರ್ವರಿಗೆ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕ ಹಿಂಸೆ : ದೂರು

ಮೈಸೂರು,ಜ.23:- ಮಹಿಳೆಯೋರ್ವರಿಗೆ ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಅರ್ಶಿಯ ಕೆ.ಎಂ. ಎಂಬವರು ದೂರು ನೀಡಿದ್ದು, 8.04.2018 ರಂದು ಜುನೇದ್ ಅಹಮ್ಮದ್ ಎಂಬವರೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಅವರ ಬೇಡಿಕೆಯಂತೆ  ಸಾಕಷ್ಟು ವರದಕ್ಷಿಣೆಯನ್ನು ಕೊಡಲಾಗಿದೆ.  ಮದುವೆಯಾದ ನಂತರ ಶಂಶಾದ್ ಬೇಗಂ, ಜಾವೀದ್ ಅಹಮ್ಮದ್,  ಫೈಜ್ ಅಹಮ್ಮದ್ ಅವರೊಂದಿಗೆ ವಾಸವಾಗಿದ್ದು, ಆ ಸಮಯದಲ್ಲಿ ತನಗೆ ಸಂಬಳವನ್ನು ನೀಡುವಂತೆ ಹಾಗೂ ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಜುನೇದ್ ಅಹ್ಮದ್ ಹೆಸರಿಗೆ ವರ್ಗಾವಣೆ ಮಾಡುವಂತೆ ಬೈದು, ಹೊಡೆದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ, ಇದಕ್ಕೆ ಒಪ್ಪದ್ದಾಗ ಮನೆಯಿಂದ ಹೊರ ಹಾಕಿದ್ದು, ನಂತರದಲ್ಲಿ  ಜುನೇದ್ ಅಹ್ಮದ್ ಬೆಂಗಳೂರಿಗೆ ಕರೆದುಕೊಂಡು ಹೋಗದೇ ಶಂಶಾದ್ ಬೇಗಂ, ಜಾವೀದ್ ಅಹಮ್ಮದ್,  ಫೈಜ್ ಅಹಮ್ಮದ್ ಜೊತೆ ಇರಿಸಿದ್ದು, ಇವರು  ಆಸ್ತಿಯನ್ನು   ಜುನೇದ್ ಅಹ್ಮದ್ ಹೆಸರಿಗೆ ಬರೆದುಕೊಡು ಇಲ್ಲವಾದರೆ ಹೆಚ್ಚಿನ ವರದಕ್ಷಿಣೆಯಾಗಿ 20 ಲಕ್ಷ ರೂಪಾಯಿಗಳನ್ನು ತವರು ಮನೆಯಿಂದ ತರುವಂತೆ ಹಿಂಸೆ ನೀಡಿದ್ದಾರೆ. ಹೆಚ್ಚಿನ ವರದಕ್ಷಿಣೆ ಹಣ ಕೊಡುವ ಹುಡುಗಿಯನ್ನು ಮದುವೆ ಮಾಡಿಸುವುದಾಗಿ  ಹೇಳಿ, ಮಾನಸಿಕವಾಗಿ ಹಿಂಸೆ ನೀಡಿದ್ದು, ನಂತರದಲ್ಲಿ  ಜುನೇದ್ ಅಹಮ್ಮದ್ 20 ಲಕ್ಷ ರೂಪಾಯಿಗಳನ್ನು ತರದಿದ್ದರೆ ಆ್ಯಸಿಡ್ ಹಾಕುವುದಾಗಿ ಹಾಗೂ ಮನೆಯವರನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆಯನ್ನು ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: