ಪ್ರಮುಖ ಸುದ್ದಿಮೈಸೂರು

ಜ.25ರಿಂದ ರಾಜ್ಯಮಟ್ಟದ ‘5S’ ಪುಟ್ಬಾಲ್ ಪಂದ್ಯಾವಳಿ

ಮೈಸೂರು,ಜ.23 : ಡಾ.ಬಿ.ಅರ್.ಅಂಬೇಡ್ಕರ್ ಪುಟ್ ಬಾಲ್ ಕ್ಲಬ್ ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಅರ್.ಅಂಬೇಡ್ಕರ್ ಅವರ 128ನೇ ಜಯಂತಿ ಅಂಗವಾಗಿ ರಾಜ್ಯಮಟ್ಟದ ‘5S’ ಪುಟ್ ಬಾಲ್ ಪಂದ್ಯಾವಳಿಯನ್ನು ಜ.25 ರಿಂದ 27ರವರೆಗೆ ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ದಕ್ಷಿಣಾಮೂರ್ತಿ ತಿಳಿಸಿದರು.

ಗಾಂಧಿನಗರದ ಸಿದ್ಧಾರ್ಥ ಪ್ರೌಢಶಾಲೆ ಮೈದಾನದಲ್ಲಿ ದಿ.25ರ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಪಂದ್ಯಾವಳಿಗೆ ಮೈಸೂರು ಡಿಸಿಪಿ ಎನ್.ವಿಷ್ಣುವರ್ಧನ್ ಚಾಲನೆ ನೀಡುವರು, ಮೈವಿವಿ ದೈಹಿಕ ಶಿಕ್ಷಣ ವಿಭಾಗದ ಉಸ್ತುವಾರಿ ನಿರ್ದೇಶಕ ಡಾ.ಕೃಷ್ಣಯ್ಯ, ನಗರಪಾಲಿಕೆ ಸದಸ್ಯ ಡಾ.ಅಶ್ವಿನಿ ಶರತ್, ಉದ್ಯಮಿ ಮಹಮದ್ ಮತ್ತಿತರರು ಹಾಜರಿರಲಿದ್ದಾರೆ ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊರ ಜಿಲ್ಲೆಗಳ 20, ಸ್ಥಳೀಯ 16, ಹಾಸನ, ಹುಬ್ಬಳ್ಳಿ ಶಿವಮೊಗ್ಗ, ಚಾಮರಾಜನಗರ, ಬೆಂಗಳೂರು ಸೇರಿದಂತೆ ಒಟ್ಟು 36 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪ್ರಥಮ 30, ದ್ವೀತಿಯ 20 ಸಾವಿರ ರೂಗಳು ಹಾಗೂ ವೈಯುಕ್ತಿಕ ಆಕರ್ಷಕ ಪ್ರಶಸ್ತಿ ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಹೇಳಿದರು.

ಜ.27ರಂದು ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವಿದ್ದು, ಶಾಸಕ ತನ್ವೀರ್ ಸೇಠ್, ಉರಿಲಿಂಗಿಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಸಂಸದ ಧ್ರುವನಾರಾಯಣ್ ಇರಲಿದ್ದು, ಶಾಸಕ ಎಸ್.ಎ.ರಾಮದಾಸ್ ಪ್ರಶಸ್ತಿ ವಿತರಿಸುವರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಬಸವರಾಜ್, ಕೆ.ವಿಶ್ವರಾಜ್, ಕೆ.ಹೇಮರಾಜ್ ಅವರೊಂದಿಗೆ ಪಂದ್ಯಾವಳಿಯ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.(ವರದಿ : ಕೆ.ಎಂ.ಆರ್)

Leave a Reply

comments

Related Articles

error: