ಪ್ರಮುಖ ಸುದ್ದಿಮೈಸೂರು

ರಂಗಾಯಣ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ : ಸಚಿವೆ ಉಮಾಶ್ರೀ

ರಂಗಾಯಣದಲ್ಲಿ ಹಲವು ತೊಂದರೆಗಳಿದ್ದು, ಅದನ್ನು ಬದಿಗಿಟ್ಟು ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ರಂಗಾಯಣದಲ್ಲಿ ಅಂತಾರಾಷ್ಟ್ರೀಯ ಬಹುರೂಪಿ ನಾಟಕೋತ್ಸವ ಉದ್ಘಾಟನೆಯಲ್ಲಿ ಪಾಲ್ಗೊಂಡ ಉಮಾಶ್ರೀ ಮಾತನಾಡಿದರು.

ಧರ್ಮವನ್ನು ಮೀರಿದ ಬಹುದೊಡ್ಡ ವಿಸ್ತಾರತೆಯನ್ನು ಮೂಡಿಸುವ ಕೆಲಸ ರಂಗಾಯಣ ಮಾಡುತ್ತಿದೆ. ಅಂದಿನಿಂದ ಇಂದಿನ ವರೆಗೂ ಸರ್ಕಾರ ರಂಗಾಯಣಕ್ಕೆ ಬೆಂಬಲ ನೀಡುತ್ತಲೇ ಬಂದಿದೆ, ಮುಂದೆಯು ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ನಿರ್ದೇಶಕ ಪರಾಕ್ರಮ ನಿರಿಯೆಲ್ಲ  ಉದ್ಘಾಟಿಸಿದರು. ಈ ಸಂದರ್ಭ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕ ವಾಸು, ಮಹಾಪೌರರಾದ ಎಂ.ಜೆ.ರವಿಕುಮಾರ್, ಡಾ.ಗಂಗೂಬಾಯಿಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಸರ್ವಮಂಗಳಾ ಶಂಕರ್, ರಂಗಕಲಾವಿದೆ ಮತ್ತು ಚಿತ್ರನಟಿ ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

ಬಿ.ಜಯಶ್ರೀ ಮತ್ತವರ ತಂಡದ ರಂಗಗೀತೆಗೆ ಪ್ರೇಕ್ಷಕರು ತಲೆದೂಗಿದರು. ಬಿ.ಜಯಶ್ರೀಯವರಿಗೆ ಉಮಾಶ್ರೀ ಸಾಥ್ ನೀಡಿದರು.

Leave a Reply

comments

Related Articles

error: