ದೇಶಪ್ರಮುಖ ಸುದ್ದಿ

ತೆರಿಗೆ ಕಟ್ಟದವರಿಗೆ ತಟ್ಟಲಿದೆ ಐಟಿ ಇಲಾಖೆ ಬಿಸಿ

ಬೆಂಗಳೂರು (ಜ.23): ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಟ್ಯಾಕ್ಸ್ ಹಣ ಕಟ್ಟದವರಿಗೆ ಹಣಕಾಸು ಇಲಾಖೆ, ಆನ್‌ ಲೈನ್ ಮೂಲಕ ಟ್ಯಾಕ್ಸ್ ರಿಟರ್ನ್ಸ್ ಫೈಲ್ ನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದು, ಇದಕ್ಕೆ 21 ದಿನ ಕಾಲಾವಕಾಶ ನೀಡಿದೆ.

ಹಣಕಾಸು ಇಲಾಖೆ ಸರಣಿ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದು, ಟ್ಯಾಕ್ಸ್ ವ್ಯಾಪ್ತಿಯಲ್ಲಿದ್ದರೂ, ಅನೇಕರು 2017-18ನೇ ಸಾಲಿನ ಆರ್ಥಿಕ ವರ್ಷದ ರಿಟರ್ನ್ಸ್ ಫೈಲ್ ನ್ನು 2018-19 ರ ಮೌಲ್ಯಮಾಪನ ವರ್ಷ ಬಂದರೂ ಕಟ್ಟಿಲ್ಲ. ಆದ್ದರಿಂದ ಕೂಡಲೇ ಆನ್ ಲೈನ್ ನಲ್ಲಿ ಈ ಅರ್ಜಿ ತುಂಬುವಂತೆ ಸೂಚನೆ ನೀಡಿದೆ.

2018-19ನೇ ಸಾಲಿನ ಟ್ಯಾಕ್ಸ್ ರಿಟರ್ನ್ಸ್ ಅರ್ಜಿಯನ್ನು ಮೌಲ್ಯ ಮಾಡಬೇಕು ಅಥವಾ 21 ದಿನದೊಳಗೆ ಅರ್ಜಿಗೆ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಅರ್ಜಿದಾರರು ನೀಡುವ ಉತ್ತರ ಸರಿಯಾಗಿದ್ದರೆ, ಆನ್‌ ಲೈನ್ ನಲ್ಲಿಯೇ ಪ್ರಕರಣ ಮುಕ್ತಾಯವಾಗುತ್ತದೆ ಎಂದು ಟ್ವೀಟ್ ನಲ್ಲಿ ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದಿನ ವರ್ಷವೂ ಇದೇ ರೀತಿಯ ಜಾಗೃತಿ ಮೂಡಿಸಿದ್ದ ಹಣಕಾಸು ಇಲಾಖೆ, ನೂತನವಾಗಿ 1.72 ಕೋಟಿ ರಿಟರ್ನ್ಸ್ ಅರ್ಜಿಗಳನ್ನು ಪಡೆದಿತ್ತು. ಈ ಅರ್ಜಿಗಳ ಒಟ್ಟು ಮೌಲ್ಯ 26425 ಕೋಟಿ ರೂ.ನಷ್ಟಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಉತ್ತರಿಸಿದ್ದರು. (ಎನ್.ಬಿ)

Leave a Reply

comments

Related Articles

error: