ಪ್ರಮುಖ ಸುದ್ದಿ

ಅಪರಿಚಿತ ವ್ಯಕ್ತಿಯ ಮೃತದೇಹ ವೆಲ್ಲೆಸ್ಲಿ ಸೇತುವೆಯ ಕೆಳಗೆ ಪತ್ತೆ

ರಾಜ್ಯ(ಮಂಡ್ಯ)ಜ.23:- ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ  ಶ್ರೀ ರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಯ ಕೆಳಗೆ ಪತ್ತೆಯಾಗಿದೆ.

ಸುಮಾರು 50-55 ರ ವಯಸ್ಸಿನ ವ್ಯಕ್ತಿಯೋರ್ವರ ಮೃತದೇಹ ಶ್ರೀ ರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಯ ಕೆಳಗೆ ಕಂಡು ಬಂದಿದ್ದು,  ಕಾವೇರಿ ನದಿಯ ತೀರದಲ್ಲಿ ದೊರೆತಿದೆ.  ಮೈಮೇಲೆ ಒಂದು ನೇರಳೆ ಬಣ್ಣದ ತುಂಬು ತೋಳಿನ ಅಂಗಿ,  ಬಿಸ್ಕಟ್ ಕಲರ್ ಸ್ವೆಟರ್  ಹಾಗೂ ಪಟ ಪಟ್ಟಿ ಚಡ್ಡಿ ಧರಿಸಿರುತ್ತಾರೆ.  ಸುಳಿವು ದೊರೆತಲ್ಲಿ    ಶ್ರೀ ರಂಗ ಪಟ್ಟಣ ಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: