ದೇಶಪ್ರಮುಖ ಸುದ್ದಿ

ಬೆಂಗಳೂರು: ಮಂಜಿನಿಂದ ವಿಮಾನದಲ್ಲೇ ಎರಡು ತಾಸು ಕಳೆದ ಪ್ರಯಾಣಿಕರು!

ಬೆಂಗಳೂರು (ಜ.23): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜಿನಿಂದಾಗಿ ಜನವರಿ 1 ರಿಂದ ಇಲ್ಲಿಯವರೆಗೆ ಒಂದು ಸಾವಿರಕ್ಕೂ ಹೆಚ್ಚು ವಿಮಾನ ಸೇವೆ ವಿಳಂಬವಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಬೇಗ ವಿಮಾನ ನಿಲ್ದಾಣಕ್ಕೆ ಬಂದರೂ ಕೂಡ ವಿಮಾನ ಹೊರಡುವ ಅವಧಿ ಕಳೆದ ಗಂಟೆಗಳ ಬಳಿಕವೂ ವಿಮಾನ ನಿಲ್ದಾಣದಲ್ಲೇ ಕೂರಿಸಿದ್ದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಐಎಎಲ್ ಮಾಹಿತಿ ಪ್ರಕಾರ ಇದುವರೆಗೂ ಒಂದು ಸಾವಿರ ವಿಮಾನಗಳು ವಿಳಂಬವಾಗಿದೆ. ಲಂಡನ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಎರಡು ಬ್ರಿಟಿಷ್ ಏರ್‌ವೇಸ್ ಬೆಂಗಳೂರಿನ ಬದಲು ಹೈದರಾಬಾದ್‌ಗೆ ಹೋಗಿ ಇಳಿದಿದೆ.

ಎರಡು ಬ್ಲ್ಯೂಡಾರ್ಟ್ ವಿಮಾನಗಳು ಚೆನ್ನೈಗೆ ಹೋಗಿಳಿದಿವೆ. ಇನ್ನು ಬೆಂಗಳೂರಿನಿಂದ ಹೊರಡಬೇಕಿದ್ದ ವಿಮಾನಗಳು ಗಂಟೆಗಟ್ಟಲೆ ತಡವಾಗಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಯಾಣಿಕರು ದೂರಿದ್ದಾರೆ. (ಎನ್.ಬಿ)

Leave a Reply

comments

Related Articles

error: