ಕರ್ನಾಟಕಪ್ರಮುಖ ಸುದ್ದಿ

ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಕಹಿ ಸುದ್ದಿ

ಬೆಂಗಳೂರು (ಜ.23): ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡ್ತಿದೆ. ಆದ್ರ ಈ ಬಾರಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದೆ. ಬಿಎಸ್‌ಎನ್‌ಎಲ್ ತನ್ನ ಯೋಜನೆಯಲ್ಲಿ ಎರಡು ಮಹತ್ವದ ಬದಲಾವಣೆ ಮಾಡಿದೆ.

ಬಿಎಸ್‌ಎನ್‌ಎಲ್ ತನ್ನ 99 ರೂಪಾಯಿ ಪ್ಲಾನ್‍ನಲ್ಲಿ ಬದಲಾವಣೆ ಮಾಡಿದೆ. 99 ರೂಪಾಯಿ ಯೋಜನೆಯ ಸಿಂಧುತ್ವದ ಅವಧಿಯಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಈ ಪ್ಲಾನ್ 26 ದಿನಗಳ ಸಿಂಧುತ್ವ ಹೊಂದಿತ್ತು. ಆದರೆ ಈಗ 24 ದಿನಗಳ ಕಾಲ ಯೋಜನೆ ಚಾಲ್ತಿಯಲ್ಲಿರಲಿದೆ.

ಬಿಎಸ್‌ಎನ್‌ಎಲ್ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಮ್ ರಿಪ್ಲೇಸ್ಮೆಂಟ್ ಚಾರ್ಜ್ ಹೆಚ್ಚಳ ಮಾಡಿದೆ. ಶೇಕಡಾ 10ರಷ್ಟು ಶುಲ್ಕ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ. ಸಿಮ್ ರಿಪ್ಲೇಸ್ಮೆಂಟ್‍ಗೆ ಗ್ರಾಹಕರು 10 ರೂಪಾಯಿ ನೀಡುತ್ತಿದ್ದರು. ಇನ್ಮುಂದೆ 100 ರೂಪಾಯಿ ನೀಡಬೇಕಾಗಿದೆ. ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಎರಡೂ ಗ್ರಾಹಕರಿಗೆ ಅನ್ವಯಿಸುತ್ತದೆ. ಇದೇ ಜನವರಿ 21 ರಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ. (ಎನ್.ಬಿ)

Leave a Reply

comments

Related Articles

error: