ಮೈಸೂರು

ಸಿದ್ದಲಿಂಗಪುರದಲ್ಲಿ ಕಿಚ್ಚುಹಾಯ್ದ ಎತ್ತುಗಳು

ಮಕರ ಸಂಕ್ರಾಂತಿ ಹಬ್ಬವನ್ನು ಮೈಸೂರಿನ ಜನತೆ ಸಡಗರ ಸಂಭ್ರಮದಿಂದ ಆಚರಿಸಿದರು.

ಸಂಕ್ರಾಂತಿ ಹಬ್ಬದ ಅಂಗವಾಗಿ ಮೈಸೂರು- ಬೆಂಗಳೂರು ಹೆದ್ದಾರಿ ಬಳಿಯ ಸಿದ್ದಲಿಂಗಪುರದಲ್ಲಿ ಹೋರಿಗಳನ್ನು ಕಿಚ್ಚು ಹಾಯಿಸಲಾಯಿತು.

ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸುಗ್ಗಿ ಸಂಭ್ರಮದ ಅಂಗವಾಗಿ ನಗರದ ಹಲವೆಡೆ ರೈತರು ಹಸು, ಎತ್ತುಗಳನ್ನು ಕಿಚ್ಚು ಹಾಯಿಸಿದರು. ಎತ್ತು ಮತ್ತು ಹಸುಗಳನ್ನು ಸಿಂಗರಿಸಿಕೊಂಡು ಬರುವ ರೈತರು ತಾವು ತಂದಿದ್ದ ಹುಲ್ಲನ್ನು ರಸ್ತೆಯುದ್ದಕ್ಕೂ ಹಾಸಿ, ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಿದರು. ಬಳಿಕ ಧಗಧಗನೆ ಉರಿಯುವ ಬೆಂಕಿಯ ಜ್ವಾಲೆಗಳ ಮಧ್ಯದಲ್ಲಿ ಹಸು-ಎತ್ತುಗಳು ಓಡಿದವು.

ರಸ್ತೆಯಲ್ಲಿ ತೆರಳುವ ನೂರಾರು ಮಂದಿ ಇವುಗಳನ್ನು ತಮ್ಮ ಕಣ್ಣುಗಳಲ್ಲಿ ತುಂಬಿಸಿಕೊಂಡರು.

Leave a Reply

comments

Related Articles

error: