ಕರ್ನಾಟಕಪ್ರಮುಖ ಸುದ್ದಿ

ಸಿದ್ದಗಂಗಾ ಶ್ರೀಗಳಿಗಾಗಿ ಪರಿತಪಿಸುತ್ತಿದ್ದ ‘ಭೈರ’ ಎಲ್ಲಿಹೋದ?

ತುಮಕೂರು (ಜ.24): ಭೈರ ಹೆಸರಿನ ಶ್ವಾನ ಮಠದಲ್ಲಿ ಸದಾ ಶ್ರೀಗಳೊಂದಿಗೆ ಓಡಾಡುತ್ತಿದ್ದ, ಸಿದ್ದಗಂಗಾ ಸ್ವಾಮೀಜಿಗಳು ಲಿಂಗೈಕ್ಯರಾದ ಬಳಿಕ ಭೈರ ಕಾಣೆಯಾಗಿದ್ದಾನೆ. ಶ್ರೀಗಳು ಲಿಂಗೈಕ್ಯ ಆಗುವ ಮೂರು ದಿನ ಹಿಂದೆ ಭೈರ ನೀರು ಆಹಾರವನ್ನು ತ್ಯಜಿಸಿತ್ತು!

ಶ್ರೀಗಳು ಲಿಂಗೈಕ್ಯರಾದ ದಿನದಿಂದ ಭೈರ ನಾಪತ್ತೆ ಆಗಿದ್ದಾನೆ. ಬಹುಶಃ ಈ ನಾಯಿ ಕೂಡ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಶ್ರೀಗಳು ಹೊರಗೆ ಹೋಗಿದ್ದಾಗ, ಭಕ್ತಾದಿಗಳಿಗೆ ದರ್ಶನ ನೀಡದಾಗ ಭೈರ ಶ್ರೀಗಳ ಜಾಗದಲ್ಲಿ ಹೋಗಿ ಅಲ್ಲಿ ಕುಳಿತು ಅಳುತ್ತಿತ್ತು ಎಂದು ಮಠದ ಸಿಬ್ಬಂದಿ ಹೇಳಿದ್ದಾರೆ.

ಕೆಲವು ಮೂಲಗಳ ಪ್ರಕಾರ, ಅಪಘಾತವೊಂದರಲ್ಲಿ ಗಾಯಗೊಂಡಿದ್ದ ನಾಯಿ ಮರಿಯ ಸ್ಥಿತಿಯನ್ನು ಕಂಡ ಸ್ವಾಮೀಜಿ ಮರುಕಪಟ್ಟು ಮಠಕ್ಕೆ ತಂದು ಆರೈಕೆ ಮಾಡಿದ್ದರು ಎನ್ನಲಾಗಿದೆ. ಆದರೆ ಇನ್ನೂ ಕೆಲವರು ಇದನ್ನು ಶ್ರೀಗಳನ್ನು ಭೂತಪ್ರೇತಗಳಿಂದ ಕಾಪಾಡಿದ ಕಾಲಭೈರವನ ಪ್ರತಿನಿಧಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಭಕ್ತರ ನಂಬಿಕೆಯೇ ಆಗಿದೆ. (ಎನ್.ಬಿ)

Leave a Reply

comments

Related Articles

error: