ಪ್ರಮುಖ ಸುದ್ದಿ

ಕಾವೇರಿ ಕುಡಿಯುವ ನೀರಿನ ಪೈಪ್ ಲೈನಿಗೆ ಶಾಸಕ ಎನ್. ಮಹೇಶ್ ಗುದ್ದಲಿ ಪೂಜೆ

ರಾಜ್ಯ(ಚಾಮರಾಜನಗರ)ಜ.24:-  ಕೊಳ್ಳೇಗಾಲ ಪಟ್ಟಣದ ನಗರಸಭೆ 1ನೇ ವಾರ್ಡ್  ನಲ್ಲಿ 1. 30 ಕೋಟಿ ವೆಚ್ಚದಲ್ಲಿ ಕಾವೇರಿ  ಕುಡಿಯುವ ನೀರಿನ ಪೈಪ್ ಲೈನಿಗೆ ಮಾಜಿ ಸಚಿವ, ಶಾಸಕರಾದ ಎನ್. ಮಹೇಶ್ ಅವರು ಹಾಗೂ 1 ನೇ ವಾರ್ಡ್ ನಗರಸಭೆ ಸದಸ್ಯರಾದ ಕವಿತ ರಾಜೇಶ್ ಅವರು  ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ  ಎನ್. ಮಹೇಶ್ ಕೊಳ್ಳೇಗಾಲ ಪಟ್ಟಣದಲ್ಲಿ 1 ನೇ ವಾರ್ಡ್ ನಲ್ಲಿ ಕಾವೇರಿ ಕುಡಿಯುವ ನೀರಿನ ಸಮಸ್ಯೆ ಇದ್ದು ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು ಕಾವೇರಿ ಕುಡಿಯುವ ನೀರಿಗೆ ಗುದ್ದಲಿ ಪೂಜೆಯನ್ನು ಹಮ್ಮಿಕೊಂಡಿದ್ದೇವೆ. ಕಾಮಗಾರಿಯು ಶೀಘ್ರ ವಾಗಿ ನಡಯಬೇಕೆಂದು ನಗರಸಭೆಯವರಿಗೆ ತಿಳಿಸಿದರು. ನಗರಸಭೆ ಸದಸ್ಯರುಗಳಾದ ನಾಗಮಣಿ ಗೋಪಾಲ್, ಜಯಮೇರಿ, ರಾಮಕೃಷ್ಣ, ಅಕ್ಮಲ್ ಪಾಷ, ವರದರಾಜು, ರಮೇಶ್, ಸುರೇಶ್, ಹಾಗೂ ನಗರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: