ಸುದ್ದಿ ಸಂಕ್ಷಿಪ್ತ

ಜನವರಿ 30 ರೊಳಗಾಗಿ ದಾಖಲಾತಿ ಸಲ್ಲಿಸಿ

ಮೈಸೂರು, ಜ24:- ಮೈಸೂರು ನಗರದಲ್ಲಿ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಯೋಜನೆಯಡಿಯಲ್ಲಿ ಹಂತ-(3)ರಲ್ಲಿ ನಿರ್ಮಿಸಿರುವ ಮನೆಗಳಿಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿನಗರ ಕೊಳಚೆ ಪ್ರದೇಶದ ಅನುಮೋದಿತ ಫಲಾನುಭವಿಗಳಿಗೆ ಜನವರಿ 30ರೊಳಗೆ ಸದರಿ ಕೊಳಚೆ ಪ್ರದೇಶದ ದಾಖಲಾತಿಗಳನ್ನು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ನಂ-1ನೇ ಉಪ-ವಿಭಾಗ ಇಲ್ಲಿಗೆ ಸಲ್ಲಿಸಿ, ಮನೆ ಹಂಚಿಕೆ ಪಡೆದುಕೊಳ್ಳಬೇಕು.

ತಪ್ಪಿದ್ದಲ್ಲಿ ತಮಗೆ ಮನೆಯ ಅಗತ್ಯತೆ ಇಲ್ಲವೆಂದು ಪರಿಗಣಿಸಿ ರದ್ದುಪಡಿಸಲು ಶಿಫಾರಸ್ಸು ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2490806 ನ್ನು ಸಂಪರ್ಕಿಸಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: