ಮೈಸೂರು

ರಂಗಭೂಮಿ ಬಹುರಾಷ್ಟ್ರೀಯ ಕಂಪನಿಗಳಿಂದ ದೂರವಿರಬೇಕು :ಎಚ್.ಎಸ್. ಶಿವಪ್ರಕಾಶ್

ರಂಗಭೂಮಿಯು ಜನರೆಡೆಗೆ ಸಾಗಬೇಕಿದ್ದರೆ ಬಹುರಾಷ್ಟ್ರೀಯ ಕಂಪನಿಗಳಿಂದ ದೂರವಿರಬೇಕು ಎಂದು ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಅಂತಾರಾಷ್ಟ್ರೀಯ ಬಹುರೂಪಿ ನಾಟಕೋತ್ಸವದ ಅಂಗವಾಗಿ ಕಲಾಮಂದಿರದ ಕಿರುರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಮ್ಮ ಪ್ರಜಾಪ್ರಭುತ್ವ ಮತ್ತು ರಂಗಭೂಮಿ ಕುರಿತ ವಿಚಾರ ಸಂಕಿರಣವನ್ನು ಎಚ್.ಎಸ್. ಶಿವಪ್ರಕಾಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ನೀನಾಸಂ, ರಂಗಾಯಣ ತನ್ನತನವನ್ನು ಉಳಿಸಿಕೊಂಡಿವೆ. ನಾಟಕ ಶಾಲೆಗಳು ಭೌತಿಕ ಸಂಪನ್ಮೂಲದ ಹಿಂದೆ ಹೋಗಬಾರದು. ಬದಲಿಗೆ ಮಾನವ ಸಂಪನ್ಮೂಲವನ್ನು ಬಳಸಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಜಾಗತೀಕರಣಕ್ಕೆ ರೋಗ ಹತ್ತಿಸುತ್ತವೆ. ಪ್ರಜಾಪ್ರಭುತ್ವವನ್ನು ಬಹುರಾಷ್ಟ್ರೀಯ ಪ್ರಜಾಪ್ರಭುತ್ವವನ್ನಾಗಿ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಂಗಕರ್ಮಿ ವೈ.ಕೆ.ನಾರಾಯಣ ಸ್ವಾಮಿ, ಧಾರವಾಡ ರಂಗಾಯಣದ ನಿರ್ದೇಶಕ ಪ್ರಕಾಶ್ ಗರುಡ, ರಂಗಾಯಣ ನಿರ್ದೇಶಕ ಕೆ.ಎ.ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: