ಕರ್ನಾಟಕಪ್ರಮುಖ ಸುದ್ದಿ

ನಾರಾಯಣ ನೇತ್ರಾಲಯಕ್ಕೆ ದಾಖಲಾದ ಶಾಸಕ ಆನಂದ್ ಸಿಂಗ್

ಬೆಂಗಳೂರು (ಜ.24): ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಹಲ್ಲೆಗೊಳಗಾಗಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರನ್ನು ಕಣ್ಣಿನ ಚಿಕಿತ್ಸೆಗಾಗಿ ನಾರಾಯಣ ನೇತ್ರಾಲಯಕ್ಕೆ ಗುರುವಾರ ದಾಖಲಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಕಂಪ್ಲಿ ಶಾಸಕ ಗಣೇಶ್‌ರಿಂದ ಹಲ್ಲೆಗೊಳಗಾಗಿದ್ದ ಆನಂದ್ ಸಿಂಗ್ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಅಲ್ಲಿ ಚೇತರಿಸಿಕೊಳ್ಳುತ್ತಿದ್ದರೂ, ಕಣ್ಣಿನ ಭಾಗಕ್ಕೆ ಬಿದ್ದಿರುವ ಪೆಟ್ಟಿನಿಂದಾಗಿ ಅವರಿಗೆ ಸರಿಯಾಗಿ ಕಣ್ಣು ಬಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಅವರನ್ನು ನಾರಾಯಣ ನೇತ್ರಾಲಯಕ್ಕೆ ಗುರುವಾರ ಬೆಳಗ್ಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ರೆಸಾರ್ಟ್ನಲ್ಲಿ ಆಪರೇಷನ್ ಕಮಲದ ವಿಚಾರವಾಗಿ ಕಂಪ್ಲಿ ಗಣೇಶ್ ಮತ್ತು ಶಾಸಕ ಭೀಮಾನಾಯ್ಕ್ ನಡುವೆ ವಾಗ್ವಾದ ಉಂಟಾಗಿ,ಅವರು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದರೆನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: