ಕರ್ನಾಟಕಪ್ರಮುಖ ಸುದ್ದಿ

ಪ್ರಧಾನಿಗೆ ಕೈ ಮುಗಿದ ಪರಿಣಿತಿಗೆ ‘ಟ್ರೋಲ್ ಮಗ ಟ್ರೋಲ್..’

ನವದೆಹಲಿ (ಜ.24): ಬಾಲಿವುಡ್ ಸೆಲೆಬ್ರಿಟಿಗಳು ಆಗಿಂದಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುವ ಬೆಳವಣಿಗೆಗಳು ನಡೆಯುತ್ತದೆ. ಈ ಸರದಿಗೆ ಈಗ ನಟಿ ಪರಿಣಿತಿ ಚೋಪ್ರಾ ಸೇರಿದ್ದಾರೆ.

ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾ ಉದ್ಘಾಟನಾ ಕಾರ್ಯಕ್ರಮದ ಚಿತ್ರವನ್ನಿಟ್ಟುಕೊಂಡು ಜಾಲತಾಣಿಗರು ಪರಿಣಿತಿ ಅವರ ಕಾಲೆಳೆಯುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹ್ಯಾಂಡ್ ಶೇಕ್ ಮಾಡಲು ಪರಿಣಿತಿಯತ್ತ ಕೈಚಾಚಿದ್ದಾರೆ. ಆದರೆ ಪರಿಣತಿ, ಹ್ಯಾಂಡ್ ಶೇಕ್ ಮಾಡುವ ಮೊದಲು ನಮಸ್ತೆ ಎಂದಿದ್ದಾರೆ.

ಈ ಸಂದರ್ಭವನ್ನು ಸಾಮಾಜಿಕ ಜಾಲತಾಣಿಗರು ಬಳಸಿಕೊಂಡಿದ್ದು, ಪರಿಣಿತಿ ಅವರದ್ದು ಫೇಕ್ ಹಾಗೂ ಪಬ್ಲಿಸಿಟಿ ಸ್ಟಂಟ್ ಎಂದು ಜರಿದಿದ್ದಾರೆ. ಈ ಹಿಂದೆ ನಮಸ್ತೆ ಇಂಗ್ಲೆಂಡ್ ಚಿತ್ರದ ಪ್ರಮೋಷನ್ ವೇಳೆ ಟೈಟ್ ಡ್ರೆಸ್ ಧರಿಸಿ ಪರಿಣಿತಿ ಅವರು ಟ್ರೋಲ್‍ಗೆ ಒಳಗಾಗಿದ್ದರು. ಸದ್ಯಕ್ಕೆ ಪರಿಣತಿ ಅವರು ಕೇಸರಿ ಚಿತ್ರದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ಅಕ್ಷಯ್ ಕುಮಾರ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. (ಎನ್.ಬಿ)

Leave a Reply

comments

Related Articles

error: