ಮೈಸೂರು

ಪುಟಾಣಿ ರತ್ನ ಪ್ರಶಸ್ತಿ ಪ್ರದಾನ 27.

ಮೈಸೂರು,ಜ.24 : ಯಶು ಚಿಲ್ಡ್ರನ್ ಅಂಡ್ ಕಲ್ಚರಲ್ ಅಕಾಡೆಮಿ, ಅರೋರ ಎಜುಕೇಷನಲ್ ಟ್ರಸ್ಟ್ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ‘ಪುಟಾಣಿ ರತ್ನ’ ಪ್ರತಿಭಾ ರತ್ನ ಮತ್ತು ಮೈಸೂರು ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.27ರ ಬೆಳಗ್ಗೆ 10.30ಕ್ಕೆ ಬಿಗ್ ಬಜಾರ್ ಎದುರುಗಡೆಯ ಸಿ.ಎಸ್.ಐ ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಕೇಂದ್ರ ಸಲಹೆಗಾರ್ತಿ ಡಾ.ಕನ್ನಿಕಾ ಉದ್ಘಾಟಿಸುವರು. ಮೈಸೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್ ಇರುವರು. ಅಕಾಡೆಮಿ ಮತ್ತು ಟ್ರಸ್ಟ್ ಅಧ್ಯಕ್ಷೆ ಯಶೋದ ನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: