ದೇಶಪ್ರಮುಖ ಸುದ್ದಿ

ವಿಡಿಯೋಕಾನ್ ಕೇಂದ್ರ ಕಚೇರಿ ಮೇಲೆ ಸಿಬಿಐ ದಾಳಿ

ನವದೆಹಲಿ (ಜ.24): ಸರಿ ಸುಮಾರು 3,250 ಕೋಟಿ ರು ಮೌಲ್ಯದ ಐಸಿಐಸಿಐ -ವಿಡಿಯೋಕಾನ್ ಸಾಲ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜ.24) ವಿಡಿಯೋಕಾನ್ ಮುಖ್ಯ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ.

ವಿಡಿಯೋಕಾನ್‍ನ ಮುಂಬೈ ಹಾಗೂ ಔರಂಗಾಬಾದ್ ಕಚೇರಿ ಹಾಗೂ ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚರ್ ಅವರ ನುಪವರ್ ಕಚೇರಿ ಮೇಲೂ ದಾಳಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಡಿಯೋಕಾನ್ ಸಂಸ್ಥೆ ಪ್ರವರ್ಧಕರಾದ ವೇಣುಗೋಪಾಲ್ ಧೂತ್ ಅವರು ಕೋಟ್ಯಂತರ ರುಪಾಯಿಗಳನ್ನು ನುಪವರ್‍ನಲ್ಲಿ ಹೂಡಿಕೆ ಮಾಡಿದ್ದರು. ಐಸಿಐಸಿಐ ಬ್ಯಾಂಕಿನಿಂದ 2012ರಲ್ಲಿ ವಿಡಿಯೋಕಾನ್ ಸಂಸ್ಥೆ 3,250 ಕೋಟಿ ರೂ. ಸಾಲ ಪಡೆ ಕೆಲ ತಿಂಗಳಲ್ಲೇ ಈ ಬೆಳವಣಿಗೆ ನಡೆದಿತ್ತು.

ಹೀಗಾಗಿ, ವೇಣುಗೋಪಾಲ್ ಧೂತ್, ದೀಪಕ್ ಕೊಚ್ಚಾರ್ ಹಾಗೂ ಇನ್ನಿತರರ ವಿರುದ್ಧ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಎಲ್ಲರ ವಿರುದ್ಧ ಎಫ್‌ಐಆರ್ ಹಾಕಿರುವ ಸಿಬಿಐ, ತನಿಖೆಯನ್ನು ಚುರುಕುಗೊಳಿಸಿದೆ. (ಎನ್.ಬಿ)

Leave a Reply

comments

Related Articles

error: