ಕರ್ನಾಟಕಪ್ರಮುಖ ಸುದ್ದಿ

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್ ಶಕ್ತಿ ಹೆಚ್ಚಾಗಲಿದೆ: ಜನಾರ್ದನ ಪೂಜಾರಿ

ಮಂಗಳೂರು (ಜ.24): ನೆಹರೂ-ಗಾಂಧಿ ಕುಟುಂಬದ ಕುಡಿಯಾಗಿರುವ ಪ್ರಿಯಾಂಕ ಗಾಂಧಿ ವಾಧ್ರಾ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಶಕ್ತಿ ಇದೆ. ಆ ಶಕ್ತಿ ಪ್ರಿಯಾಂಕಾ ಬಂದ ಮೇಲೆ ಜಾಸ್ತಿಯಾಗಲಿದೆ. ಮೋದಿಯವರಿಗೆ ನಿದ್ದೆ ಬಾರದ ರೀತಿ ಪ್ರಿಯಾಂಕಾ ಕೆಲಸ ಮಾಡಲಿದ್ದಾರೆ ಎಂದರು.

ರಾಬರ್ಟ್ ವಾದ್ರಾ ಮೇಲಿನ ಪ್ರಕರಣ ಸಾಬೀತಾಗಿಲ್ಲ, ಆದರೂ ಪ್ರಿಯಾಂಕ ರಾಜಕೀಯ ಪ್ರವೇಶವನ್ನು ಬಿಜೆಪಿ ಕುಟುಂಬ ರಾಜಕಾರಣವೆನ್ನುತ್ತಿದೆ. ಬಿಜೆಪಿಯೂ ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು.

ಶಾಸಕ ಆನಂದ್ ಸಿಂಗ್‍ಗೆ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ರಾಜಕೀಯ ಕೊಳಕಾಗಿದೆ. ನಾನು ಮಾಡಿದ್ದೇ ಸರಿ ಎಂಬ‌ ಭಾವನೆ ಬಂದಿದೆ. ಅದಕ್ಕೆ ದಾರಿಯಲ್ಲಿ ಪೆಟ್ಟು ತಿಂದಿದ್ದಾರೆ. ಜನ ಪೆಟ್ಟು ಕೊಡೋದು ಮಾತ್ರ ಬಾಕಿಯಿದೆ ಎಂದು ನುಡಿದರು. (ಎನ್.ಬಿ)

Leave a Reply

comments

Related Articles

error: