ಮೈಸೂರು

ಸೂಕ್ತ ಭದ್ರತೆಯ ನಡುವೆ ನಡೆಯುತ್ತಿದೆ ಶಿಕ್ಷಕರ ಅರ್ಹತಾ ಪರೀಕ್ಷೆ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಭಾನುವಾರ ಮೈಸೂರು ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದೆ.

ಪರೀಕ್ಷಾ ಸಂಬಂಧ 26 ಮುಖ್ಯ ಅಧೀಕ್ಷಕರು, 26 ಸಾನ್ವಿಕ ಜಾಗೃತ ದಳ ಮತ್ತು 7 ಮಾರ್ಗಾಧಿಕಾರಿಗಳು ನಿಯೋಜನೆಗೊಂಡಿದ್ದು, ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಳಿಗ್ಗೆ 9.30 ರಿಂದ ಮೊದಲ ಪತ್ರಿಕೆ ನಡೆಯುತ್ತಿದ್ದು, ಎರಡನೇ ಪತ್ರಿಕೆ ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯಲಿದೆ. ಪತ್ರಿಕೆ-1ರಲ್ಲಿ 5214 ಹಾಗೂ ಪತ್ರಿಕೆ-2ರಲ್ಲಿ 8181 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎನ್ನುವ ಮಾಹಿತಿಯಿದ್ದು, ಗೈರಾದವರ ವಿವರ ತಿಳಿದುಬರಬೇಕಿದೆ. ಮರಿಮಲ್ಲಪ್ಪ, ಸದ್ವಿದ್ಯಾ, ವಿದ್ಯಾವರ್ಧಕ ಸೇರಿದಂತೆ ಹಲವು ಕಡೆ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಪರೀಕ್ಷಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿದ್ದು, ಸೂಚನೆಯ ಅನುಸಾರ ನೀಲಿ ಅಥವಾ ಕಪ್ಪು ಶಾಯಿ ಬಾಲ್ ಬಾಯಿಂಟ್ ಪೆನ್ನ ಅನ್ನು ಮಾತ್ರ ಪರೀಕ್ಷೆಯಲ್ಲಿ ಕೊಂಡೊಯ್ದಿದ್ದಾರೆ. ಮುಂಜಾಗೃತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿದೆ. ಸೂಕ್ತ ಭದ್ರತೆಯ ನಡುವೆ ಪರೀಕ್ಷೆ ನಡೆಯುತ್ತಿದೆ.

Leave a Reply

comments

Related Articles

error: