ಮೈಸೂರು

ಶಾಸಕ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಕೃಷ್ಣರಾಜ ಕ್ಷೇತ್ರದ 3 ವಾರ್ಡ್‍ಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಮೈಸೂರು,ಜ.25:- ಕೃಷ್ಣರಾಜ ಕ್ಷೇತ್ರದ 3 ವಾರ್ಡ್‍ಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ನಿನ್ನೆ ಶಾಸಕ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಚಾಲನೆಯನ್ನು ನೀಡಲಾಯಿತು.

ವಾರ್ಡ್ ನಂ- 52 ಇಟ್ಟಿಗೆಗೂಡು ವ್ಯಾಪ್ತಿಯಲ್ಲಿರುವ  ನಗರಪಾಲಿಕೆಯ ಅನುದಾನದಿಂದ 25 ಲಕ್ಷ ರೂ.ಗಳ ಮೊತ್ತದಲ್ಲಿ ಟ್ಯಾಂಕ್ ಬಂಡಾರ್‍ನ 9 ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಯನ್ನು ಸಿದ್ದಪ್ಪಾಜಿ ಛತ್ರದ ಹತ್ತಿರ, ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಹಾಗೂ ಸ್ಥಳೀಯ ನಗರಪಾಲಿಕೆ ಸದಸ್ಯರಾದ ಛಾಯದೇವಿ ಅವರ ಸಮ್ಮಖದಲ್ಲಿ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಉಪಮಹಾಪೌರರಾದ ವನಿತಾ ಪ್ರಸನ್ನ, ಬಿ.ಜೆ.ಪಿ ಮುಖಂಡರಾದ  ಪ್ರಸನ್ನ, ನವೀನ್, ಹರೀಶ್, ಕುಮಾರ್, ಜನಾರ್ದನ್, ಸಂತೋಷ್, ಲೋಕೇಶ್, ಸುಂದರ್, ಪೇರುಮಳ್  ಹಾಗೂ ಸ್ಥಳೀಯರು ಹಾಜರಿದ್ದರು.

ವಾರ್ಡ್ ನಂ- 64 ಶ್ರೀರಾಂಪುರ ವ್ಯಾಪ್ತಿಗೆ ಬರುವ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಮುಡಾ ಅನುದಾನದ ವತಿಯಿಂದ 75 ಲಕ್ಷ ರೂ.ಗಳ ವೆಚ್ಚದಲ್ಲಿ ಡಾಂಬರೀಕರಣ, ಒಳಚರಂಡಿ ಮತ್ತು ನೀರಿನ ಕೊಳವೆಮಾರ್ಗ  ಕಾಮಗಾರಿಗೆ ಶಾಸಕರ ನೇತೃತ್ವದಲ್ಲಿ  ಸ್ಥಳೀಯ ನಗರಪಾಲಿಕೆ ಸದಸ್ಯರಾದ ಛಂಪಕ ಕೆ ರವರ ಅಧ್ಯಕ್ಷತೆಯಲ್ಲಿ ಚಾಲನೆಯನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಮುಡಾ ವಲಯ ಆಯುಕ್ತರಾದ ಭಾಸ್ಕರ್, ಇಂಜಿನೀಯರ್ ಲೋಕೇಶ್ ಮತ್ತು ಶಿವಕುಮಾರ್, 65ನೇ ವಾರ್ಡ್‍ನ ನಗರಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗಾನಂದ್,  ಗುತ್ತಿಗೆದಾರರಾದ ಭೈರಪ್ಪ, ಜಿ.ಆರ್. ನಾಗರಾಜು, ಬಿ.ಜೆ.ಪಿ. ಮುಖಂಡರಾದ ಗಿರೀಶ್, ರಾಮನಾಥ್, ಪ್ರಕಾಶ್, ಪ್ರಶಾಂತ, ಶಿಲ್ಪ, ಮುರುಳಿ, ಗೋಪಾಲ್, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.

ವಾರ್ಡ್ ನಂ- 65, ಶ್ರೀರಾಂಪುರ ವ್ಯಾಪ್ತಿಗೆ ಸೇರಿದ ಅಶ್ವಿನಿ ಕಲ್ಯಾಣ ಮಂಟಪದ ರಸ್ತೆ ಮತ್ತು ಬಾಕ್ಸ್ ಮಾದರಿ ಚರಂಡಿಯನ್ನು ಮುಡಾ ಅನುದಾನದ ವತಿಯಿಂದ 25 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಮಗಾರಿಗೆ ಶಾಸಕರ ನೇತೃತ್ವದಲ್ಲಿ ಹಾಗೂ  ಸ್ಥಳೀಯ ನಗರಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗಾನಂದ್  ಅವರ ಅಧ್ಯಕ್ಷತೆಯಲ್ಲಿ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಡಾ ವಲಯ ಆಯುಕ್ತರಾದ ಭಾಸ್ಕರ್, ಇಂಜಿನೀಯರ್ ಲೋಕೇಶ್ ಮತ್ತು ಶಿವಕುಮಾರ್, ಯೋಗಾನಂದ್, 64ನೇ ವಾರ್ಡ್‍ನ ನಗರಪಾಲಿಕೆ ಸದಸ್ಯರಾದ ಚಂಪಕ ಕೆ,ವಾರ್ಡ್ ಅಧ್ಯಕ್ಷರಾದ ಗಿರೀಶ್,  ರಾಘವೇಂದ್ರ ಮುಂತಾದವರು ಹಾಜರಿದ್ದರು.(ಎಸ್.ಎಚ್)

Leave a Reply

comments

Related Articles

error: