ಮೈಸೂರು

ವರದಕ್ಷಿಣೆ ಕಿರುಕುಳ : ಗೃಹಿಣಿ ಸಾವು

ಪತಿಯ ಮಾನಸಿಕ ಕಿರುಕುಳ,ಅನೈತಿಕ ಸಂಬಂಧಕ್ಕೆ ಬೇಸತ್ತು  ಗೃಹಿಣಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ್ದರು. ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದಿರುವುದರಿಂದ ಇದೀಗ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ವಿಜಯನಗರ ನಿವಾಸಿ ಅನಿಲ್ ಪತ್ನಿ ಅಂಜಲಿ (23) ಎಂದು ಗುರುತಿಸಲಾಗಿದೆ. ಅಂಜಲಿ ನಾಯರ್  ವಿಜಯನಗರ ನಿವಾಸಿ ಎಸ್ ಬಿಐ ಬ್ಯಾಂಕಿನ ಮ್ಯಾನೇಜರ್  ಡಿ.ಮರಿಸ್ವಾಮಿ ನಾಯಕ್ ಪುತ್ರಿಯಾಗಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ತಿಲಕ್ ನಗರದ ನಿವಾಸಿ ಅನಿಲ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಅನಿಲ್ ಅನೈತಿಕ ಸಂಬಂಧ ಹೊಂದಿದ್ದು, ಅಂಜಲಿ ಇದನ್ನು ತಿಳಿದಿದ್ದರು ಎನ್ನಲಾಗಿದೆ. ಪತಿಯ ಅನೈತಿಕ ಸಂಬಂಧ ಹಾಗೂ  ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಜನವರಿ ಒಂದರಂದು ವಿಜಯನಗರದ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಅಂಜಲಿ ನಾಯರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪ್ರಕರಣ ಸಂಬಂಧ ಪತಿ ಅನಿಲ್,ಅತ್ತೆ ಶಶಿಕಲಾ ಮಾವ ನಾಗರಾಜ್, ಮೈದುನ ಅಜಯ್.ಸೋದರ ಮಾವ ಚಂದ್ರ ಶೇಖರ್ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Leave a Reply

comments

Related Articles

error: