ಕರ್ನಾಟಕಪ್ರಮುಖ ಸುದ್ದಿಮೈಸೂರು

ಮಹಾತ್ಮಾ ಗಾಂಧಿಯವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ : ಸುರೇಶ್ ಕುಮಾರ್ ಸ್ಪಷ್ಟನೆ

ಯಾರಿಂದಲೂ ಮಹಾತ್ಮಾ ಗಾಂಧಿಯವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರನಲ್ಲಿ  ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರಕರ್ತರ ಪ್ರಶ್ನೆಳಿಗೆ ಉತ್ತರಿಸಿದರು. ಖಾದಿ ಇಂಡಿಯಾ ಕ್ಯಾಲೆಂಡರ್‌ನಲ್ಲಿ ಮೋದಿ ಭಾವಚಿತ್ರ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಈಗಾಗಲೇ ಬಿಜೆಪಿಯಿಂದ ಸ್ಪಷ್ಟೀಕರಣ ನೀಡಲಾಗಿದೆ. ಯಾರೂ ಕೂಡ ಮಹಾತ್ಮಾ ಗಾಂಧಿಯವರ ಸ್ಥಾನ ತುಂಬಲು ಸಾಧ್ಯವಿಲ್ಲ. ಹಾಗೇನಾದರೂ ಗಾಂಧಿ ಸ್ಥಾನದ ಕುರಿತು ಮಾತನಾಡುವವರ ಬುದ್ದಿ ಪ್ರೌಢಿಮೆ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದರು.
ಖಾದಿ ಇಂಡಿಯಾ ಕ್ಯಾಲೆಂಡರ್ ನಲ್ಲಿ ಈ ಮೊದಲು ಗಾಂಧಿ ಭಾವಚಿತ್ರ ತೆಗೆದು ಹಾಕಿದ ಉದಾಹರಣೆಗೆ ಇದೆ.
ಈ ವರ್ಷ 12 ತಿಂಗಳ ಕ್ಯಾಲೆಂಡರ್‌ನಲ್ಲಿ ಜನವರಿ ತಿಂಗಳಲ್ಲಿ ಮಾತ್ರ ಮೋದಿ ಭಾವಚಿತ್ರ ಇದೆ. ಹಾಗಾಗಿ ಗಾಂಧಿಜೀಯವರ ಜೊತೆ ಮೋದಿಯವರ  ಹೋಲಿಕೆ ಇಲ್ಲಿ ಅಪ್ರಸ್ತುತ ಎಂದು ಸ್ಪಷ್ಟಪಡಿಸಿದರು.

ಬಿಎಸ್‌ವೈ-ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಈ ಬೆಳವಣಿಗೆ ನನ್ನನ್ನು ಒಳಗೊಂಡಂತೆ ಹಲವು ಮಂದಿ ನಾಯಕರು ಹಾಗೂ ಕಾರ್ಯಕರ್ತರಿಗೆ ಬೆಸರವಾಗಿದೆ. ಅವರ ಭಿನ್ನಾಭಿಪ್ರಾಯ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಯಾರೂ ಕೂಡ ಬಹಿರಂಗ ಹೇಳಿಕೆ ಪತ್ರ ಬರೆಯುವುದು ನೀಡುತ್ತಿರುವುದು ಸರಿಯಲ್ಲ.ಈಶ್ವರಪ್ಪ ಆಪ್ತರನ್ನು ಅಮಾನತು ಮಾಡಿರುವುದನ್ನು ಸಹ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಲಾಗುವುದು. ಪಕ್ಷದ ವರಿಷ್ಠರು ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭ ಬಿಜೆಪಿಯ ಕೆಲವು ಕಾರ್ಯಕರ್ತರು ಸುರೇಶ್ ಕುಮಾರ್ ಜೊತೆಗಿದ್ದರು.

 

Leave a Reply

comments

Related Articles

error: