ಪ್ರಮುಖ ಸುದ್ದಿಮೈಸೂರು

ಪರವಾನಿಗೆ – ಬೆಂಬಲ ಬೆಲೆಗಾಗಿ ತಂಬಾಕು ಬೆಳೆಗಾರರ ಹೋರಾಟ ಸಮಿತಿ ಒತ್ತಾಯ

ಮೈಸೂರು, ಜ.25 : ಜಿಲ್ಲೆಯಲ್ಲಿರುವ ಅನಧಿಕೃತ ತಂಬಾಕು ಬೆಳೆಗಾರರಿಗೆ ಪರವಾನಿಗೆ ನೀಡಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕೆಂದು ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿಯು ಆಗ್ರಹಿಸಿತು.

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಗೋವಿಂದಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 24 ಸಾವಿರ ಜನ ಅನಧಿಕೃತ ತಂಬಾಕು ಬೆಳೆಗಾರರು 2008ರಿಂದಲೇ ಪರವಾನಿಗೆ ನೀಡಬೇಕೆಂದು ಹಲವು ಬಾರಿ ಮನವಿ ಮಾಡಿದ್ದರು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ.

ಅಲ್ಲದೇ, ತಾವು ಬೆಳೆದ ತಂಬಾಕು ಕಳೆದ ಸಾಲಿನಲ್ಲಿ ಜನವರಿಯಲ್ಲಿ ಖರೀದಿ ಮಾಡಿದ್ದರು, ಆದರೆ ಈ ಸಲ ಆರು ತಿಂಗಳುಗಳೇ ಆಗಿದ್ದರು  ಖರೀದಿಸದೇ ಅದರ ಗುಣಮಟ್ಟ ಕುಸಿಯುತ್ತಿದೆ, ಹಾಗೂ ಪ್ರತಿ ಕೆಜಿಗೆ 2 ರೂ ಸೇರಿದಂತೆ ಹೆಚ್ಚುವರಿಯಾಗಿ ಶೇ.15ರಷ್ಟು ದಂಡ ವಿಧಿಸುತ್ತಿದ್ದು ಇದರಿಂದ ತೀವ್ರ ಸಂಕಷ್ಟ ಎದುರಾಗಿದೆ, ತಮ್ಮ ಅಹವಾಲನ್ನು ಹಲವು ಬಾರಿ ತಿಳಿಸಿದ್ದರು ಸ್ಥಳೀಯ ಸಂಸದರು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಬೇಡಿಕೆ : ವಿಧಿಸುತ್ತಿರುವ ದಂಡ ರದ್ದುಗೊಳಿಸಬೇಕು, ಪರವಾನಿಗೆ ನೀಡಬೇಕು, ಪ್ರತಿ ಕೆಜಿಗೆ ರೂ.200 ಬೆಂಬಲ ಬೆಲೆ ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಬಸವರಾಜ್, ರೈತ ಮುಖಂಡರಾದ ಚಂದ್ರಪ್ಪ, ಮಾದೇವ ನಾಯಕ, ಎಂಕೊಪ್ಪಲು ಕೃಷ್ಣೇಗೌಡ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: