ಮೈಸೂರು

ನೈತಿಕತೆಯನ್ನು ಬಿಂಬಿಸುವಂತಹ ಶಿಕ್ಷಣವನ್ನು ನೀಡಬೇಕಾಗಿದೆ : ಭೀಮರಾಜ ಈರೇಗೌಡ

ಮೈಸೂರು,ಜ.25:-  ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ವೇದಿಕೆ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನಿಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವ್ಯಕ್ತಿತ್ವವಿಕಸನ ತರಬೇತುದಾರರಾದ ಭೀಮರಾಜ ಈರೇಗೌಡ ಮಾತನಾಡಿ  ಪ್ರಸ್ತುತ ಸಮಾಜದಲ್ಲಿ ಎಷ್ಟೋ ಜನ ಹೆಣ್ಣು ಮಕ್ಕಳು ಪದವಿ ಪೂರ್ವ ಶಿಕ್ಷಣದಿಂದ ವಂಚಿತರಾಗಿದ್ದು, ಅದರಲ್ಲಿ ನಿಮ್ಮಂತಹ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಅವಕಾಶ ನೀಡಿರುವಂತಹ ಈ ಪ್ರತಿಷ್ಠಾನವನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಬದುಕನ್ನು ಕಾಣಲು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಈ ಕನಸನ್ನು ನನಸು ಮಾಡಲು ಅದರ ಬೆನ್ನತ್ತಿ ಬೆಂಬಿಡದೆ ಮುಂದೆ ಸಾಗಿದಾಗ ಮಾತ್ರ ನಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ನಾವು ನೈತಿಕತೆಯನ್ನು ಬಿಂಬಿಸುವಂತಹ ಶಿಕ್ಷಣವನ್ನು ನೀಡಬೇಕಾಗಿದೆ. ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕೆ ಹೊರತು ನಷ್ಟವಾಗಬಾರದು. ಮಾನವ ಚಿಂತನಗಳಲ್ಲಿ ಒಳಗಾಗುವ ಬದಲಾಗಿ ಇಂದು ಚಿಂತೆಗೆ ಒಳಗಾಗಿ ತನ್ನ ವಾಸ್ತವಿಕತೆಯನ್ನೇ ಮರೆಯುತ್ತಿದ್ದಾನೆ. ಒಬ್ಬ ಶಿಕ್ಷಣ ನಿರಂತರವಾಗಿ ವಿದ್ಯಾರ್ಥಿಯಾಗಿ ಹಾಗೂ ವಾಸ್ತವಿಕತೆಯನ್ನು ಅರಿತು ಬಾಳಬೇಕು. ಶಿಕ್ಷಕರು ಸದಾ ಜಾಗೃತರಾಗಿ ಎಚ್ಚರಿಕೆಯಿಂದ ಇದ್ದಾಗ ಮಾತ್ರ ಹೊಸತನ ಸೃಷ್ಟಿಸಿ ಒಂದು ಶೈಕ್ಷಣಿಕ ಸಂಸ್ಥೆಯನ್ನು ಹುಟ್ಟು ಹಾಕಲು ಸಾಧ್ಯ. ವಿದ್ಯಾರ್ಥಿಗಳು ಓದಿನ ಜೊತೆಗೆ ಸೃಜನಶೀಲತೆಯನ್ನು ಬೆಳೆಸಿಕೊಂಡು ಸಮಯವನ್ನು ಸದ್ಬಳಕೆ ಮಾಡಿಕೊಂಡು ಸದ್ಗುಣಿಗಳಾಗಬೇಕು ಎಂದು ತಿಳಿಸಿದರು.

ಬಹುಮಾನ ವಿತರಿಸಿ ಮಾತನಾಡಿದ  ಹಿರಿಯ ಪತ್ರಕರ್ತ ಎಂ.ಆರ್. ಸತ್ಯನಾರಾಯಣ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಸೂಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ವೇದಿಕೆಗಳು ಮುಖ್ಯವಾಗಿದೆ.  ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ಮಾದರಿಯ ಶಿಕ್ಷಣವನ್ನು ನೀಡುತ್ತಾ ಬಂದಿರುವ ಸಂಸ್ಥೆಯ ಈ ಕಾರ್ಯ ಶ್ಲಾಘನೀಯ  ಎಂದರು.

ನಿವೃತ್ತರ ಪ್ರಾಚಾರ್ಯರಾದ ಹೆಚ್.ಎಂ. ಬಸವರಾಜಪ್ಪ, ಮಾತನಾಡಿ  ಕ್ರೀಡೆ ಎಲ್ಲಾ ದೇಶಗಳನ್ನು ಒಗ್ಗೂಡಿಸುತ್ತದೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರ ಜೊತೆಗೆ ಪ್ರೀತಿಸುವುದನ್ನು ಕಲಿಯಬೇಕು. ಶ್ರದ್ಧೆಯ ಕಾಲ ಮತ್ತು ಶುದ್ಧಿಯ ಸೂಜಿ ಎರಡು ಕೂಡ ವಿದ್ಯಾರ್ಥಿಗಳಿಗೆ ಹೆಚ್ಚು ಸೂಕ್ತ. ಇದರಿಂದ ಮಾತ್ರ ವಿದ್ಯಾರ್ಥಿಗಳ ಏಳಿಗೆ ಸಾಧ್ಯ. ಪ್ರಾಮಾಣಿಕತೆ ವಿದ್ಯಾರ್ಥಿಗಳ ಮೂಲ ಮಂತ್ರವಾಗಬೇಕು. ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು ಪಠ್ಯ, ಪಠ್ಯೇತರ ಎರಡು ಚಟುವಟಿಕೆಗಳನ್ನ ರೂಢಿಸಿಕೊಂಡು ವಿನಯತೆಯನ್ನು ಹೊಂದಿ ವೈಚಾರಿಕತೆಯನ್ನು ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ರಾಣಿ ಕೆ.ಎನ್. ಉಪನ್ಯಾಸಕರುಗಳಾದ  ಗುರು ಹೆಚ್.ಆರ್., ಸುನೀತರಾಣಿ ವಿ.ಡಿ, ಗುರುಶಾಂತಮ್ಮ  ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: