ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಮೈಸೂರು,ಜ.26:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಭವನದ ಮುಂಭಾಗದಲ್ಲಿ  ಇಂದು ಬೆಳಿಗ್ಗೆ 8.30ಕ್ಕೆ ಏರ್ಪಡಿಸಿದ್ದ 70ನೇ ಗಣ ರಾಜ್ಯೋತ್ಸವ ಸಮಾರಂಭದಲ್ಲಿ  ಕರಾಮುವಿ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ಅವರು ಧ್ವಜಾರೋಹಣ ನೆರವೇರಿಸಿ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಶುಭಾಶಯ ಕೋರಿ ದರು.

ಬಳಿಕ ಮಾತನಾಡಿದ ಅವರು  ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದ (26-01-1950ರ) ದಿನಾಂಕವನ್ನು ಗಣರಾಜ್ಯೋತ್ಸವ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಸರ್ವಸಮಾನತೆ, ಸಂಪನ್ಮೂಲಗಳ ಸಮಾನ ಹಂಚಿಕೆ, ಸಾಮಾಜಿಕ ನ್ಯಾಯ, ಹಕ್ಕುಗಳ ಜೊತೆ ಕರ್ತವ್ಯ ಪ್ರಜ್ಞೆಯನ್ನು ಪ್ರತಿ ಪಾದಿಸುವುದೇ ಮೊದಲಾದ ಆಶಯಗಳನ್ನು ನಮ್ಮ ಸಂವಿಧಾನ ಹೊಂದಿದೆ. ಭಾರತವು ವಿವಿಧ ಧರ್ಮ, ಸಂಸ್ಕೃತಿ, ಭಾಷೆಗಳಿರುವ ದೇಶ. ವಿವಿಧತೆ ಇದ್ದಾಗ್ಯೂ ಐಕ್ಯತೆ ಹೊಂದಿರುವುದು ನಮ್ಮ ದೇಶದ ಅನನ್ಯತೆ. ರಾಷ್ಟ್ರದಲ್ಲಿ ಪರ ವಿರೋಧಗಳನ್ನು ಬಿಟ್ಟು ಸಮಾನತೆ, ಐಕ್ಯತೆ, ಸಾಮರಸ್ಯ ತರುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಿದಾಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಸಿಗುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕುಲಸಚಿವ ಪ್ರೊ.ರಮೇಶ್‍ಬಿ., ಡೀನ್(ಶೈಕ್ಷಣಿಕ) ಡಾ. ಜಗದೀಶ, ಹಣಕಾಸು ಅಧಿಕಾರಿ ಡಾ. ಎ. ಖಾದರ್‍ಪಾಷ, ಕುಲಸಚಿವ(ಪರೀಕ್ಷಾಂಗ) ಡಾ. ಎಂ.ಎಸ್.ರಮಾನಂದ ಡೀನ್ ಅಧ್ಯಯನ ಕೇಂದ್ರ ಪ್ರೊ. ಡಿ.ಟಿ. ಬಸವರಾಜು ಕರಾಮುವಿಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.  (ಎಸ್.ಎಚ್)

Leave a Reply

comments

Related Articles

error: