ಪ್ರಮುಖ ಸುದ್ದಿಮೈಸೂರು

ಪ್ರತಿ ಪ್ರಜೆಯ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಹಕ್ಕು ನೀಡಿದರೂ ಅಸ್ಪೃಶ್ಯತೆ, ಅಸಮಾನತೆಯ ವೈರುಧ್ಯಗಳಿವೆ : ಸಚಿವ ಜಿ.ಟಿ.ದೇವೇಗೌಡ ವಿಷಾದ

70ನೇ ಗಣರಾಜ್ಯೋತ್ಸವ ಆಚರಣೆ

ಮೈಸೂರು,ಜ.26:-  70 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.

25 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕೆ.ಎಸ್.ಆರ್.ಪಿ. ಡಿಎಆರ್,  ಸಿಎಆರ್, ತುಕಡಿ, ಕೆ.ಆರ್. ಎನ್.ಆರ್. ದೇವರಾಜ ಪೊಲೀಸ್ ವಿಭಾಗದಿಂದ, ಗೃಹರಕ್ಷಕದಳ, ಅಬಕಾರಿ ವಿಭಾಗ, ಪೊಲೀಸ್ ಪಬ್ಲಿಕ್ ಶಾಲೆ, ಸ್ಕೌಟ್ ಮತ್ತು ಗೈಡ್ಸ್ ಶಾಲೆ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಪೊಲೀಸ್ ಬ್ಯಾಂಡ್ ನಿಂದ ವಿವಿಧ ಗೀತೆಗಳ ಮೂಲಕ ಗೌರವ ವಂದನೆಯನ್ನು ಉಸ್ತುವಾರಿ ಸಚಿವರು ಸ್ವೀಕರಿಸಿದರು. ಪಥ ಸಂಚನದಲ್ಲಿ ಸ್ತಬ್ಧ ಚಿತ್ರಗಳು ಗಮನ ಸೆಳೆಯಿತು.  ರಾಜ್ಯ ಚುನಾವಣಾ ಆಯೋಗದಿಂದ ಮತದಾನದ ಅರಿವು ಮೂಡಿಸುವ  ಸ್ತಬ್ಧ ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

70 ನೇ ಗಣರಾಜ್ಯೋತ್ಸ ದಿನದ ಸಂದೇಶ ನೀಡಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ ಭಾರತ ಸಂವಿಧಾನದ ನಿಜವಾದ ಪಿತಾಮಹ ಡಾ.ಅಂಬೇಡ್ಕರ್.  ಭಾರತ ಸಂವಿಧಾನ ಕೇವಲ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಹಿತವನ್ನು ಮಾತ್ರ ಕಾಪಾಡದೆ ಇಡೀ ಭಾರತ ಜನತೆಯ ಆಶೋತ್ತರಗಳನ್ನ ಈಡೇರಿಸುತ್ತದೆ. ಜ್ಯಾತ್ಯಾತೀತ ರಾಷ್ಟ್ರದ ವಿಶಾಲ ಚಿಂತನೆಯ ತಳಹದಿಯ ಮೇಲೆ ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತೃತ್ವೆ ಸ್ಥಾಪನೆಗಾಗಿ ರೂಪುಗೊಂಡ ಶ್ರೇಷ್ಠ ಸಂವಿಧಾನ. ಇದು ಜಗತ್ತೇ ಮೆಚ್ಚುವ ಪ್ರಜಾಪ್ರಭುತ್ವ.  ಪ್ರತಿ ಪ್ರಜೆಯ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಹಕ್ಕು ನೀಡಿದರೂ,ಇನ್ನೂ ನಮ್ಮಲ್ಲಿ ಅನಕ್ಷರತೆ ,ಆರ್ಥಿಕ ಅಸಮಾನತೆ, ಅಸ್ಪೃಶ್ಯತೆ ಮುಂತಾದ ವೈರುಧ್ಯತೆ ಇರುವುದು ಎಲ್ಲೋ ಒಂದು ಕಡೆ ನಾವು ನಮ್ಮ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂಬ ಅನುಮಾನ ಮೂಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನನಗೆ ಈಗ 70 ವರ್ಷ. 70 ವರ್ಷದ ಗಣರಾಜೋತ್ಸವ ಸಂದರ್ಭದಲ್ಲಿ ನಾನು ಉಸ್ತುವಾರಿಯಾಗಿ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ ಎಂದರು.

ಗಣರಾಜ್ಯೋತ್ಸವ ಸಂಭ್ರದ ವೇಳೆ ಮೈಸೂರು ಸಿಟಿ ಪ್ಯಾಂಥರ್ಸ್ ಕಮ್ಯಾಂಡೊಗಳಿಂದ ಭದ್ರತೆ ಸಂಬಂಧ ಅಣುಕು ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ತನ್ವೀರ್ ಸೇಠ್, ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷ ಸಾ ರಾ ನಂದೀಶ್, ಉಪ ಮೇಯರ್ ಶಫಿ ಅಹಮದ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್,  ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್ಪಿ ಅಮಿತ್ ಸಿಂಗ್ ಸೇರಿ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: