ದೇಶ

ಚುನಾವಣೆ ಸೌಂದರ್ಯ ಸ್ಪರ್ಧೆಯಲ್ಲ: ಸುಶೀಲ್ ಮೋದಿ

ಕೊಲ್ಕೊತ್ತಾ,ಜ.28-ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ ಬಳಿಕ ಅವರ ವಿರುದ್ಧ ವೈಯಕ್ತಿಕ ಟೀಕಾಪ್ರಹಾರಗಳು ಹೆಚ್ಚಾಗುತ್ತಿದೆ.

ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಬಿ.ಜೆ.ಪಿ.ಯ ಹಿರಿಯ ನಾಯಕ ಸುಶೀಲ್ ಮೋದಿ, ‘ಚುನಾವಣೆ ಎಂಬುದು ಸೌಂದರ್ಯ ಸ್ಪರ್ಧೆಯಲ್ಲ, ಮತದಾರರು ಅಭ್ಯರ್ಥಿಯ ಸಾಧನೆಯನ್ನು ನೋಡಿ ಮತ ಹಾಕುತ್ತಾರೆಯೇ ಹೊರತು ಅಭ್ಯರ್ಥಿಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಯಾರೂ ಮತ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಚುನಾವಣೆಯೆಂಬುದು ಕುಸ್ತಿ ಪಂದ್ಯಾಟವೂ ಅಲ್ಲ, ಸೌಂದರ್ಯ ಸ್ಪರ್ಧೆಯೂ ಅಲ್ಲ, ಅಥವಾ ಇನ್ಯಾವುದೇ ರೀತಿಯ ಸ್ಪರ್ಧಾ ಕಣವೂ ಇದಲ್ಲ ಎಂದು ಸುಶೀಲ್ ಮೋದಿ ಅವರು ಕೊಲ್ಕೊತ್ತಾದ ಹೌರಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರಣಬ್ ಮುಖರ್ಜಿಯವರಿಗೆ ಪ್ರಧಾನ ಮಂತ್ರಿ ಪಟ್ಟ ತಪ್ಪಿಸುವ ಮೂಲಕ ಗಾಂಧಿ ಕುಟುಂಬವು ತನ್ನದೇ ಪಕ್ಷದ ಹಿರಿಯ ನಾಯಕರಿಗೆ ಅನ್ಯಾಯವೆಸಗಿದೆ ಎಂಬ ಗಂಭೀರ ಆರೋಪವನ್ನೂ ಸುಶೀಲ್ ಮೋದಿ ಇದೇ ಸಂದರ್ಭದಲ್ಲಿ ಮಾಡಿದರು.

ಇಂತಹ ಹಿರಿಯ ನಾಯಕರಿಗೆ ಭಾರತ ರತ್ನ ನೀಡುವ ಮೂಲಕ ಪ್ರಣಬ್ ಅವರ ಸಾಧನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುರುತಿಸಿದೆ ಅದಕ್ಕಾಗಿ ನಾನು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಅವರು ನುಡಿದರು.

ಪ್ರಿಯಾಂಕಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷವು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ ಬೆನ್ನಲ್ಲೇ ಬಿ.ಜೆ.ಪಿ. ಮತ್ತು ಅದರ ಮಿತ್ರ ಪಕ್ಷಗಳಲ್ಲಿ ಅಳುಕು ಹುಟ್ಟಿದಂತಿದೆ. (ಎಂ.ಎನ್)

 

Leave a Reply

comments

Related Articles

error: