
ಮೈಸೂರು
ಫೆ.3 ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ : ನಿಯಮ ಬಾಹಿರವಾಗಿ ಕೆಲ ನಾಮಪತ್ರ ತಿರಸ್ಕಾರ ಆರೋಪ
ಮೈಸೂರು,ಜ.28:- ಮೈಸೂರಿನಲ್ಲಿ ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ ನಡೆಯಲಿದ್ದು, ನಿಯಮ ಬಾಹಿರವಾಗಿ ಕೆಲ ನಾಮಪತ್ರ ತಿರಸ್ಕಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಬ್ಯಾಂಕ್ ಇದಾಗಿದ್ದು, ಫೆ.3 ರಂದು ಚುನಾವಣೆ ನಿಗದಿಯಾಗಿದೆ. ಸಹಕಾರ ಇಲಾಖೆ ಚುನಾವಣಾಧಿಕಾರಿಯಾಗಿ ಜ್ಯೋತಿ ಅರಸು ಕರ್ತವ್ಯ ನಿರ್ವಹಿಸಲಿದ್ದು, ಆದರೆ ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಶ್ರೀನಿವಾಸ್ ಮೂರ್ತಿಯಿಂದ ಚುನಾವಣಾ ಪ್ರಕ್ರಿಯೆ ಆರೋಪ ಕೇಳಿ ಬಂದಿದೆ. ಬ್ಯಾಂಕ್ನ ಕೆಲವರು ಉದ್ದೇಶಪೂರ್ವಕವಾಗಿ ಶ್ರೀನಿವಾಸ ಮೂರ್ತಿ ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಫಿಯುಲ್ಲಾ ಬೇಗ್ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬ್ಯಾಂಕ್ಗೆ ತೆರಳಿ ಜ್ಯೋತಿ ಅರಸುರನ್ನು ಅಭ್ಯರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾರದರ್ಶಕವಾಗಿ ಚುನಾವಣಾ ನಡೆಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)