ಮೈಸೂರು

ಶಾಸಕರು ಸಿಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆ ಟೇಬಲ್ ಕುಟ್ಟಿದ ಮಹಿಳೆ : ಸಿಡಿಮಿಡಿಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಜ.28:- ಶಾಸಕರು ಸಿಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆ ಮಹಿಳೆಯೋರ್ವರು ಟೇಬಲ್ ಕುಟ್ಟಿದ್ದು, ಮಹಿಳೆ ವರ್ತನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೋಪಗೊಂಡ ಘಟನೆ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ನಡೆದಿದೆ.

ಸಮಸ್ಯೆ ಹೇಳುತ್ತಿದ್ದ ಮಹಿಳೆಯಿಂದ ಮೈಕ್ ಕಿತ್ತುಕೊಂಡ ಸಿದ್ದರಾಮಯ್ಯನವರು ಮಹಿಳೆಯ ಬಾಯಿ ಮುಚ್ಚಿಸಿ ಕೋಪತಾಪ ಪ್ರದರ್ಶಿಸಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದೆ. ಎಲ್ಲರ ಎದುರೇ ಮಹಿಳೆ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆಗೂ ಮುನ್ನ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಮಲಾರ್ ಸಮಸ್ಯೆ ಹೇಳುತ್ತಿದ್ದರು. ಮಹಿಳೆ ಜಮಲಾರ್ ಮೇಲಿನ ಆಕ್ರೋಶಕ್ಕೆ ಟೇಬಲ್ ಕುಟ್ಟಿದರು. ನಂತರ ಎಂಎಲ್ಎ ಸಿಗೋಲ್ಲ ಎಂದು ದೂರು ಹೇಳಿದರು. ಮಗ ಸಿಗೋಲ್ಲ ಅಂದಾಕ್ಷಣ ಸಿದ್ದರಾಮಯ್ಯ ಕೆಂಡಾಮಂಡಲರಾದರು. ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿದರು. ಏನಮ್ಮ ನಾವೇನು ದೇಶಕ್ಕೆ ಅನ್ಯಾಯ ಮಾಡಿರೋರ ಥರ ಮಾತಾಡ್ತಿದ್ದೀಯಾ. ಟೇಬಲ್ ಕುಟ್ಟಿ ಮಾತಾಡ್ತಿಯಾ ? ನನ್ನ ಮುಂದೆಯೇ ಟೇಬಲ್ ಕುಟ್ಟಿ ಮಾತನಾಡುತ್ತಿದ್ದಿಯಾ.ಕುತ್ಕೋಮ್ಮ ಸುಮ್ಮನೆ ಎಂದು ಮಹಿಳೆ ಹಾಗೂ ಜಮಲಾರ್‌ರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಮಹಿಳೆ ಬಳಿ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶಿಸಿದರು.  ಈ ವೇಳೆ ಸಂಸದ ಧ್ರುವ ನಾರಾಯಣ್ , ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಥಳದಲ್ಲಿಯೇ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: