
ಪ್ರಮುಖ ಸುದ್ದಿ
ಟಿಕೆಟ್ ಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮನೆಗೆ ಹೋಗಿಲ್ಲ : ಸಂಸದ ಎಂ.ವೀರಪ್ಪ ಮೊಯ್ಲಿ
ರಾಜ್ಯ(ಬೆಂಗಳೂರು)ಜ.28:- ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಸದ ಎಂ.ವೀರಪ್ಪ ಮೊಯ್ಲಿ ಅವರಿಗೆ ಟಿಕೇಟ್ ಕೈತಪ್ಪುವ ಗುಮಾನಿ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಟಿಕೆಟ್ ಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮನೆಗೆ ಹೋಗಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ನಮ್ಮ ಸೇವೆ ಕಾಂಗ್ರೆಸ್ ಗೆ ಅವಶ್ಯಕತೆ ಇದ್ದರೆ ಖಂಡಿತ ಟಿಕೆಟ್ ನೀಡ್ತಾರೆ, ನಮ್ಮ ಸೇವೆಯನ್ನು ಇದೀಗ ನಿರಂತರವಾಗಿ ಕ್ಷೇತ್ರಕ್ಕೆ ಮಾಡಲಾಗುತ್ತಿದೆ ಎಂದಿದ್ದು, ಇನ್ನೂ ಟಿಕೆಟ್ ಕೊಡುವ ಸಂಬಂಧ ಸಭೆಯಾಗಿಲ್ಲ, ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಲೋಕಸಭಾ ಎಲೆಕ್ಷನ್ ಎದುರಿಸುತ್ತೇವೆ ಎಂದಿದ್ದಾರೆ.
ಅನಂತ್ ಕುಮಾರ್ ಹೆಗಡೆ ಹಿಂದು ಹೆಣ್ಣು ಮಕ್ಕಳನ್ನು ಮುಟ್ಟಿದ್ರೆ ಕೈ ಕಡಿಯಿರಿ ಎನ್ನುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ರ ಯಾರೇ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಶಿಕ್ಷೆಯಾಗಬೇಕು, ಅದನ್ನು ಬಿಟ್ಟು ಪ್ರಚೋದನೆ ಕೊಡುವಂತಹ ಹೇಳಿಕೆ ಕೇಂದ್ರ ಸಚಿವರಿಗೆ ಶೋಭೆ ತರುವಂತದ್ದಲ್ಲ ಎಂದು ತಿರುಗೇಟು ನೀಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಸಚಿವರು ಈಗಾಗಲೇ ಬರಪೀಡಿತ ಕ್ಣೇತ್ರಗಳಿಗೆ ತೆರಳಿ ಅಧ್ಯಯನ ನಡೆಸಿ ವರದಿ ತಯಾರು ಮಾಡಿದ ನಂತರ ಬಿಜೆಪಿಗೆ ಈಗ ಕಣ್ಣು ತೆರೆದಿದೆ ಎಂದು ಬಿಜೆಪಿ ಪ್ರವಾಸದ ಬಗ್ಗೆ ಲೇವಡಿಯಾಡಿದರು. (ಕೆ.ಎಸ್,ಎಸ್.ಎಚ್)