ಮೈಸೂರು

ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

ಮೈಸೂರು.ಜ.29:-  ಎಂ.ಎನ್.ಜಿ.ಟಿ-ನಾಗನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮೀ. ನಂ. 133/200-100 ರಲ್ಲಿ ಸುಮಾರು 35-40 ವರ್ಷದ ವ್ಯಕ್ತಿಯೋರ್ವರು ಜನವರಿ 27 ರಂದು ಚಲಿಸುವ ರೈಲುಗಾಡಿಗೆ ಸಿಕ್ಕಿ ಮೃತಪಟ್ಟಿದ್ದು, ಮೈಸೂರು ರೈಲ್ವೆ ಪೊಲೀಸ್ ಠಾಣೆಯವರು ತನಿಖೆ ಕೈಗೊಂಡಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.

 ಅಪರಿಚಿತ ವ್ಯಕ್ತಿಯ ಚಹರೆ ಇಂತಿದೆ

ಎತ್ತರ 5.8 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು (ತೆಳುವಾದ) ತಲೆಯಲ್ಲಿ 2 ಇಂಚು ಕಪ್ಪು ಕೂದಲು 1/2 ಇಂಚು ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ.
ಬಲಗೈ ರಟ್ಟೆಯಲ್ಲಿ ಕೃಷ್ಣೇಗೌಡ ಎಂಬ ಹಚ್ಚೆಯ ಗುರುತು. ಬಲಭುಜದ ಮೇಲೆ ಹುಲಿ ಆಕಾರದ ಹಚ್ಚೆ ಗುರುತು ಇರುತ್ತದೆ.  ಆಕಾಶ ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್, ಕಪ್ಪು, ಬಿಳಿ ಮತ್ತು ಸಿಮೆಂಟ್ ಮಿಶ್ರತ ಬಣ್ಣದ ತುಂಬು ತೋಳಿನ ಟಿ-ಶರ್ಟ್, ಸೊಂಟದಲ್ಲಿ ಕಪ್ಪು ಬಣ್ಣದ ಉಡದಾರ, ಎಡ ಕಿವಿಯಲ್ಲಿ ಚಿಕ್ಕ ಓಲೆ ಧರಿಸಿರುತ್ತಾರೆ.
ಮೃತ ದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಶವಗಾರದಲ್ಲಿಡಲಾಗಿದೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇರುವವರು ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: