ಮೈಸೂರು

ದೇವಸ್ಥಾನದ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ಗೆ ತಿಳಿಯದಂತೆ ಬಂದಂತಮ್ಮ ಕಾಳಮ್ಮ ದೇವಸ್ಥಾನದಲ್ಲಿ ಕಳ್ಳರ ಕೈಚಳಕ

ಮೈಸೂರು,ಜ.29:- ದೇವಸ್ಥಾನದ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ನಿಗೆ ತಿಳಿಯದಂತೆ ದೇವಸ್ಥಾನದ ಬಾಗಿಲು ಬೀಗ  ಮುರಿ  ಒಳನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಹಣ, ತಾಯಿಯ ಕತ್ತಿನಲ್ಲಿದ್ದ ಚಿನ್ನದ ತಾಳಿ ಕದ್ದೊಯ್ದ  ಹೋದ ಘಟನೆ ಕುವೆಂಪುನಗರದಲ್ಲಿ ನಡೆದಿದೆ.

ಕುವೆಂಪುನಗರದಲ್ಲಿನ ಅಕ್ಷಯ್ ಭಂಡಾರ ಬಳಿ ಇರುವ ಬಂದಂತಮ್ಮ ಕಾಳಮ್ಮ ದೇವಾಲಯದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಖದೀಮರು ದೇವರ ಮೇಲಿದ್ದ ತಾಳಿಯನ್ನು ಕೂಡ ಬಿಟ್ಟಿಲ್ಲ ಎನ್ನಲಾಗಿದೆ. ದೇವಾಲಯದ ಹುಂಡಿಯಲ್ಲಿದ್ದ ಹಣ ಲೂಟಿ ಮಾಡಿ ಪರಾರಿಯಾಗಿದ್ದು, ಸೆಕ್ಯೂರಿಟಿ ಗಾರ್ಡ್ ಇದ್ದರೂ ಕಳ್ಳತನ ನಡೆದಿದೆ. ಸ್ಥಳಕ್ಕೆ ಕುವೆಂಪುನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಕೂಡ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ದೇವಾಲಯದ ಸುತ್ತ ಸಿಸಿಟಿವಿ ಅಳವಡಿಸಿದ್ದರೂ ಕೂಡ ಕಳ್ಳತನ ನಡೆದಿದೆ. ಪೊಲೀಸರು ಸಿಸಿಟಿವಿ ಪೂಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.    ಈ ಕುರಿತು ನಗರ ಪಾಲಿಕೆ ಸದಸ್ಯ, ದೇವಸ್ಥಾನದ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ ಬೆಳಗಿನ ಜಾವ 4.45ರಿಂದ 5ಗಂಟೆಯ ವೇಳೆ ವಾಚ್ ಮನ್ ನಿಂದ ಕರೆ ಬಂತು. ಸೆಕ್ಯೂರಿಟಿ ಗಾರ್ಡ್ ಗಿಡಗಳಿಗೆ ನೀರು ಹಾಯಿಸಲು ಬಂದಾಗ ದೇವಸ್ಥಾನದ ಗರ್ಭಗುಡಿಯವರೆಗಿನ ಬಾಗಿಲು ತೆರೆದಿರುವುದು ಕಂಡು ಬಂದಿದ್ದು, ನಮಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಮೂರು ಗೋಲಕವಿತ್ತು. ದೇವರ ಮೈಮೇಲಿದ್ದ ಚೈನು, ಚಿನ್ನದ ತಾಳಿ ಸುಮಾರು 125ಗ್ರಾಂ ಚಿನ್ನ ಕದ್ದು ಹೋಗಿದ್ದಾರೆ. ಗೋಲಕದಲ್ಲಿನ ಹಣ ಎಣಿಕೆಯಾಗಿರಲಿಲ್ಲ. ಪೊಲೀಸರು ತನಿಖೆ ಮಾಡುತ್ತಾರೆ. ಒಳಗಡೆ ಇರುವ ಚಿನ್ನವನ್ನು ಕದಿಯಲಿಕ್ಕೆ ಕಳ್ಳರಿಗೆ ಸಾಧ್ಯವಾಗಿಲ್ಲ. ನಮಗೆ ಯಾರ ಮೇಲೂ ಅನುಮಾನವಿಲ್ಲ. ಕಳ್ಳತನ ಕೃತ್ಯದಲ್ಲಿ ತೊಡಗಿಸಿಕೊಂಡವರೇ ಕೃತ್ಯವೆಸಗಿದ್ದಾರೆ. ಪಕ್ಕದಲ್ಲೇ ಸೆಕ್ಯೂರಿಟಿ ಇದ್ದರೂ ಅವನಿಗೆ ತಿಳಿಯದಂತೆ ಕಳ್ಳತನ ಮಾಡಿದ್ದಾರೆ. ಖಂಡಿತ ಶೀಘ್ರದಲ್ಲೇ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದರು.

ದೇವಸ್ಥಾನ ಜನ ರಹಿತ ಪ್ರದೇಶದಲ್ಲಿ ಇಲ್ಲದೆ ರಸ್ತೆಗೆ ಸಮೀಪದಲ್ಲಿಯೇ ಇದೆ. ದಾರಿ ಹೋಕರಿಗೆ ಕಾಣಸಿಗುವಂತಿದೆ. ಅಂತಹ ಸಂದರ್ಭದಲ್ಲಿಯೂ ಕಳ್ಳರು ತಮ್ಮ ಕೈಚಳಕ ತೋರಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: