ಪ್ರಮುಖ ಸುದ್ದಿ

ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ತೀವ್ರ ಸಂತಾಪ

ರಾಜ್ಯ(ಬೆಂಗಳೂರು)ಜ.29:-  ಕೇಂದ್ರದ  ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಹೆಮ್ಮೆಯ ಪುತ್ರನಾಗಿ ತಮ್ಮ ಹೋರಾಟಗಳ ಮೂಲಕವೇ ರಾಷ್ಟ್ರ ನಾಯಕರಾಗಿ ಬೆಳೆದ ಜಾರ್ಜ್, ಸಮಾಜವಾದಿ ಸಿದ್ಧಾಂತಗಳ ಪ್ರಬಲ ಪ್ರತಿಪಾದಕರಾಗಿದ್ದರು. ಕಲುಷಿತ ಇಂದಿನ ರಾಜಕಾರಣದಲ್ಲಿ ಯುವ ಪೀಳಿಗೆಗೆ  ಮಾದರಿಯಾಗಿದ್ದರು.

ಕೇಂದ್ರ ಸರ್ಕಾರದಲ್ಲಿ ಉನ್ನತ ಇಲಾಖೆಗಳ ಸಚಿವರಾಗಿದ್ದಾಗಲೂ ತಮ್ಮ ಸರಳತೆಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಜಾರ್ಜ್ ಅತ್ಯುತ್ತಮ ಸಂಸದೀಯ ಪಟುವಾಗಿದ್ದರು.

12ನೇ ಶತಮಾನದ ಕ್ರಾಂತಿಕಾರಿ ಅಣ್ಣ ಬಸವಣ್ಣನವರ ತತ್ವ ಆದರ್ಶಗಳಿಗೆ ಮಾರು ಹೋಗಿದ್ದ ಜಾರ್ಜ್ ಫರ್ನಾಂಡಿಸ್ ತಮ್ಮ ಜೀವನದಲ್ಲಿಯೂ ಅವುಗಳನ್ನು ಅಳವಡಿಸಿಕೊಂಡಿದ್ದರು. ಅವರ ನಿಧನದಿಂದ ರಾಷ್ಟ್ರ ಶ್ರೇಷ್ಠ ಸಮಾಜವಾದಿ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: