Uncategorized

ಡಿಫರೆಂಟ್ ಡ್ಯಾನಿಗೆ ಗೌರವ ಡಾಕ್ಟರೇಟ್

ಬೆಂಗಳೂರು,ಜ.29-ಸ್ಯಾಂಡಲ್ ವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ.

ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ.

ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಮತ್ತು ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

‘ಜೋಗಿ’, ‘ದುನಿಯಾ’, ‘ಜಾಕಿ’, ‘ದೊಡ್ಮನೆ ಹುಡುಗ’, ‘ಮಫ್ತಿ’ ಸೇರಿದಂತೆ 600 ಹೆಚ್ಚು ಚಿತ್ರಗಳಿಗೆ ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜಿಸಿದ್ದಾರೆ. ನ್ಯಾಚುರಲ್ ಮತ್ತು ದಿಫರೆಂಟ್ ಸ್ಟಂಟ್ ಗಳಿಗೆ ಡ್ಯಾನಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಈಗಲೂ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಾಹಸ ನಿರ್ದೇಶಕರಲ್ಲಿ ಡಿಫರೆಂಟ್ ಡ್ಯಾನಿ ಒಬ್ಬರು. (ಎಂ.ಎನ್)

Leave a Reply

comments

Related Articles

error: