ಸುದ್ದಿ ಸಂಕ್ಷಿಪ್ತ

ಜ.31ರಂದು ದೂರು ನಿವಾರಣಾ ಘಟಕದ ಉದ್ಘಾಟನೆ

ಮೈಸೂರು,ಜ.29 : ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದಿಂದ ಕಿರು ಹಣಕಾಸು ಸಂಸ್ಥೆಗಳ ಗ್ರಾಹಕರಿಗೆ ಹಣಕಾಸು ನಿರ್ವಹಣೆಯ ಕಾರ್ಯಾಗಾರ ಮತ್ತು ಕುಂದುಕೊರತೆಗಳ ದೂರು ನಿವಾರಣಾ ಘಟಕದ ಉದ್ಘಾಟನಾ ಸಮಾರಂಭವನ್ನು ಜ.31ರ ಬೆಳಗ್ಗೆ 11 ಗಂಟೆಗೆ ಬಂಬೂ ಬಜಾರ್ ನ ಶಿವಶಕ್ತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಉದ್ಘಾಟಿಸುವರು. ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ.ವೆಂಕಟಾಚಲಪತಿ, ನಬಾರ್ಡ್ ನ ಎಸ್.ಮಣಿಕಂಠನ್ ಇನ್ನಿತರರು ಇರಲಿದ್ದಾರೆ. ಅಕಿಂನ ನಿರ್ದೇಶಕ ಎಸ್.ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: