ಸುದ್ದಿ ಸಂಕ್ಷಿಪ್ತ

ನಾಳೆಯಿಂದ ವಿಶೇಷ ವಾರ್ಷಿಕ ಶಿಬಿರ

ಮೈಸೂರು,ಜ.29 : ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿಶೇಷ ವಾರ್ಷಿಕ ಶಿಬಿರವು ಜ.30 ರಿಂದ ಫೆ.5ರವರೆಗೆ ವರುಣ ಗ್ರಾಮದಲ್ಲಿ ಜರುಗಲಿದೆ.

ಜ.30ರ ಸಂಜೆ 5 ಗಂಟೆಗೆ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ಎಸ್.ಪರಮಶಿವಯ್ಯ ಅಧ್ಯಕ್ಷತೆಯಲ್ಲಿ. ಜೆಎಸ್ಎಸ್ ಮುಕ್ತಶಾಲೆ ನಿರ್ದೇಶಕ ಡಾ.ಕೆ.ಎಂ.ವೀರಯ್ಯ ಉದ್ಘಾಟಿಸುವರು. ಹಲವು ಗಣ್ಯರು ಹಾಜರಿರಲಿದ್ದಾರೆ. ಫೆ.5ರಂದು ಸಮಾರೋಪ ಸಮಾರಂಭ, ಕರ್ನಾಟಕ ರಾಜ್ಯ ವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ.ಜಿ.ಸಿ.ರಾಜಣ್ಣ ಸಮಾರೋಪ ಭಾಷಣ ಮಾಡುವರು. ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: