ಕ್ರೀಡೆ

ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಭಾರತ `ಎ’ ತಂಡಕ್ಕೆ ಗೆಲುವು

ತಿರುವನಂತಪುರಂ,ಜ.30- ಭಾರತ ‘ಎ’ ತಂಡ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ 4ನೇ ಅನಧಿಕೃತ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಸಾಧಿಸಿತು.

ರಿಷಭ್‌ ಪಂತ್‌(73) ಅಜೇಯ ಅರ್ಧಶತಕ ಮತ್ತು ಶಾರ್ದೂಲ್‌ ಠಾಕೂರ್‌ ಆಕರ್ಷಕ ಬೌಲಿಂಗ್‌ ನೆರವಿನಿಂದ ಭಾರತ ಇಂಗ್ಲೆಂಡ್ ಲಯನ್ಸ್ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಯನ್ಸ್ 8 ವಿಕೆಟ್ ನಷ್ಟಕ್ಕೆ 221 ರನ್ ಸಿಡಿಸಿತು. ಒಲ್ಲಿ ಪೊಪ್ 65 ರನ್ ಸಿಡಿಸಿದರೆ, ಸ್ಟೀವನ್ ಮುಲಾನೆ 58 ರನ್ ಕಾಣಿಕೆ ನೀಡಿದರು. ಭಾರತದ ಪರ ಶಾರ್ದೂಲ್ ಠಾಕೂರ್ 4 ಹಾಗೂ ರಾಹುಲ್ ಚಹಾರ್ 2 ವಿಕೆಟ್ ಕಬಳಿಸಿದರು.

222 ರನ್ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಕೆ.ಎಲ್.ರಾಹುಲ್ 42 ರನ್ ಕಾಣಿಕೆ ನೀಡಿದರು. ರಿಷಬ್ ಪಂತ್ ಅಜೇಯ 73 ಹಾಗೂ ದೀಪಕ್ ಹೂಡ ಅಜೇಯ 47 ರನ್ ಸಿಡಿಸೋ ಮೂಲಕ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. (ಎಂ.ಎನ್)

 

Leave a Reply

comments

Related Articles

error: