ಸುದ್ದಿ ಸಂಕ್ಷಿಪ್ತ

‘ಶಾಸ್ತ್ರೀಯ ಕನ್ನಡ ಪಠ್ಯಗಳ ಅನುಸಂಧಾನ’ ಕಮ್ಮಟ : ಆಹ್ವಾನ

ಮೈಸೂರು,ಜ.30 : ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ, ಗುಲ್ಬರ್ಗಾ ವಿವಿಯ ಕನ್ನಡ ವಿಭಾಗದಲ್ಲಿ ಫೆಬ್ರವರಿ ಎರಡನೆ ವಾರದಲ್ಲಿ 5 ದಿನಗಳ ಕಮ್ಮಟವನ್ನು ಆಯೋಜಿಸಲಾಗುತ್ತಿದೆ.

ಫೆ.13 ರಿಂದ 17ರವರೆಗೆ ‘ಶಾಸ್ತ್ರೀಯ ಕನ್ನಡ ಪಠ್ಯಗಳ ಅನುಸಂಧಾನ’ ವಿಷಯವಾಗಿ ನಡೆಯುವ ಕಮ್ಮಟದಲ್ಲಿ ಕನ್ನಡ ಸಾಹಿತ್ಯದ ಯುವ ಸಂಶೋಧಕರು, ಕನ್ನಡ ಅಧ್ಯಾಪಕರಿಗೆ ಪ್ರಾಚೀನ ಕನ್ನಡ ಸಾಹಿತ್ಯದ ಪಠ್ಯಗಳ ಅಧ್ಯಯನ ಮತ್ತು ಬೋಧನೆಗೆ ತರಬೇತಿ ನೀಡಲಾಗುವುದು.

ಹದಿನೆಂಟು ಜನ ಹಿರಿಯ ವಿದ್ವಾಂಸರು ಹಲವು ವಿಷಯಗಳ ಬಗ್ಗೆ ಉಪನ್ಯಾಸ ಮಂಡಿಸಲಿದ್ದಾರೆ. ಕಮ್ಮಟದಲ್ಲಿ ಪಾಲ್ಗೊಳ್ಳಲಿರುವ ಶಿಬಿರಾರ್ಥಿಗಳಿಗೆ ಊಟ, ವಸತಿ ಮತ್ತು ಪಯಣ ಭತ್ಯೆಯನ್ನು ನೀಡಲಾಗುವುದು. ಫೆ.2 ಕೊನೆ ದಿನವಾಗಿದೆ. ವಿವರಗಳಿಗೆ ಮೊ.ಸಂ.9449163751, 9741436723 ಸಂಪರ್ಕಿಸಬಹುದಾಗಿದೆ ಎಂದು ಯೋಜನಾ ನಿರ್ದೇಶಕರಾದ ಡಾ.ಕೆ.ಆರ್.ದುರ್ಗಾದಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: