ಸುದ್ದಿ ಸಂಕ್ಷಿಪ್ತ

ದಿನದರ್ಶಿಕೆ ಬಿಡುಗಡೆ : ನಿವೃತ್ತರ ಸನ್ಮಾನ

ಮೈಸೂರು,ಜ.30 : ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಜಿಲ್ಲಾ ಶಾಖಾ ವತಿಯಿಂದ ದಿನದರ್ಶಿಕೆ ಬಿಡುಗಡೆ ಹಾಗೂ ನಿವೃತ್ತ ಪದಾಧಿಕಾರಿಗಳ ಸನ್ಮಾನವನ್ನು ಜ.31ರ ಮಧ್ಯಾಹ್ನ 4.30ಕ್ಕೆ ಅಕ್ಕನಬಳಗ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯೋಪಾಧ್ಯಾಯರ ಸಂಘದ  ರಾಜ್ಯಾಧ್ಯಕ್ಷ ಕೆ.ಕೃಷ್ಣಪ್ಪ ಡಾ.ರಾಧಕೃಷ್ಣನ್ ಭಾವಚಿತ್ರ ಅನಾವರಣಗೊಳಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಸ್.ಮಮತ ದಿನದರ್ಶಿಕೆ ಬಿಡುಗಡೆಗೊಳಿಸಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ ಎಂದು ಅಧ್ಯಕ್ಷ ದುಂಡಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಶಿವಲಿಂಗರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: