ದೇಶಮನರಂಜನೆ

ಅಭಿಮಾನಿಗಾಗಿ ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ತೆರಳಿದ ಶ್ರದ್ಧಾ ಕಪೂರ್

ಮುಂಬೈ,ಜ.31-ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅಭಿಮಾನಿಯನ್ನು ನೋಡಲು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯೊಂದಿಗೆ ಕಾಲ ಕಳೆದಿದ್ದಾರೆ.

 

ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿರುವ 13 ವರ್ಷದ ಬಾಲಕಿ ಸುಮಯ್ಯಾ, ಶ್ರದ್ಧಾ ಕಪೂರ್ ಅಭಿಮಾನಿ. ಅವರನ್ನು ಭೇಟಿಯಾಗುವುದು ನನ್ನ ಕೊನೆಯಾಸೆ ಎಂದು ಪೋಷಕರು, ವೈದ್ಯರ ಬಳಿ ಹೇಳಿಕೊಂಡಿದ್ದಾಳೆ. ಈ ವಿಷಯವನ್ನು ಶ್ರದ್ಧಾ ಕಪೂರ್ ಗೆ ತಿಳಿಸಲಾಗಿತ್ತು.

ಸಾಹೋ ಚಿತ್ರದ ಶೂಟಿಂಗ್ ಬ್ಯುಸಿಯಲ್ಲಿರುವ ಶ್ರದ್ಧಾ ವಿಷಯ ತಿಳಿದ ಕೂಡಲೇ ಬಾಲಕಿ ಆಸೆ ಈಡೇರಿಸಲು ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ಧಾವಿಸಿದ್ದಾರೆ. ಬೇರೆಯವರಿಗೆ ಗೊತ್ತಾದರೆ ಇತರೆ ರೋಗಿಗಳಿಗೆ ತೊಂದರೆ ಆದೀತೆಂದು ಬುರ್ಖಾ ಧರಿಸಿ ಬಂದಿದ್ದರು.

ಅಚ್ಚರಿ ಎಂದರೆ ಶ್ರದ್ಧಾ ಭೇಟಿ ನಂತರ ಸುಮಯ್ಯಾ ಖುಷಿಯಾಗಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. (ಎಂ.ಎನ್)

Leave a Reply

comments

Related Articles

error: